ಅಡುಗೆ: ಗಜ್ಜರಿ ಕೀರು
– ಸವಿತಾ.
ಬೇಕಾಗುವ ಸಾಮಾನುಗಳು
- ಗಜ್ಜರಿ ತುರಿ [ಕ್ಯಾರೆಟ್] – 2 ಕಪ್
- ಒಣ ಕೊಬ್ಬರಿ ತುರಿ -1 ಕಪ್
- ಬೆಲ್ಲ ಅತವಾ ಸಕ್ಕರೆ – 1 ಕಪ್
- ಮಕಾನಾ – 1 /4 ಕಪ್
- ಗೋಡಂಬಿ – 4
- ಬಾದಾಮಿ – 4
- ಒಣ ದ್ರಾಕ್ಶಿ – 10
- ತುಪ್ಪ – 3 ಚಮಚ
- ಹಾಲು – 3 ಕಪ್
- ಅರಿಶಿಣ ಸ್ವಲ್ಪ
- ಏಲಕ್ಕಿ – 2
ಮಾಡುವ ಬಗೆ
ಗಜ್ಜರಿ ಸಿಪ್ಪೆ ತೆಗೆದು, ತುರಿದು ಇಟ್ಟುಕೊಳ್ಳಿ. ಹಾಗೇ ಒಣ ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಮಕಾನಾ ಸ್ವಲ್ಪ ಹುರಿದು ತೆಗೆಯಿರಿ. ಗೋಡಂಬಿ, ಬಾದಾಮಿ, ಸ್ವಲ್ಪ ಒಣ ಕೊಬ್ಬರಿ ಸೇರಿಸಿ ಮಿಕ್ಸರ್ ನಲ್ಲಿ ತರಿತರಿಯಾಗಿ ಪುಡಿ ಮಾಡಿ ತೆಗೆದಿಡಿ.
ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಒಣ ದ್ರಾಕ್ಶಿ ಹಾಕಿ ಹುರಿಯಿರಿ. ನಂತರ ತುರಿದ ಗಜ್ಜರಿ ಹಾಕಿ ಹುರಿಯಿರಿ. ಮಿಕ್ಸರ್ ನಲ್ಲಿ ಮಾಡಿದ ಪುಡಿ ಸೇರಿಸಿ, ಅರ‍್ದ ಲೋಟ ನೀರು ಸೇರಿಸಿ ಸ್ವಲ್ಪ ಕುದಿಸಿ. ಹಾಲು ಹಾಕಿ ಕುದಿಸಿ.
ಸ್ವಲ್ಪ ಅರಿಶಿಣ, ತುಪ್ಪ, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ . ಕೊನೆಗೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಸೇರಿಸಿ , ಒಲೆ ಆರಿಸಿ ಇಳಿಸಿ. ಈಗ ಗಜ್ಜರಿ [ಕ್ಯಾರೆಟ್] ಕೀರು ಸವಿಯಲು ಸಿದ್ದ. ಬಿಸಿ ಬಿಸಿ ಕೀರನ್ನು ಪುರಿ ಜೊತೆ ಅತವಾ ಊಟದ ಜೊತೆ ಹಾಗೇ ಸವಿಯಿರಿ .
ಇತ್ತೀಚಿನ ಅನಿಸಿಕೆಗಳು