ಚಾಮರಾಜನಗರ ಶೈಲಿಯ ಮೊಳಕೆ ಕಟ್ಟಿದ ಸಾರು
ಏನೇನು ಬೇಕು
- ಬದನೆಕಾಯಿ – 2
- ಆಲೂಗೆಡ್ಡೆ – 2
- ಟೊಮೆಟೊ – 2
- ಈರುಳ್ಳಿ – 1
- ಬೆಳ್ಳುಳ್ಳಿ – 2 ಎಸಳು
- ಕೊತ್ತಂಬರಿಸೊಪ್ಪು – ಸ್ವಲ್ಪ
- ಶುಂಟಿ – ಸಣ್ಣ ಚೂರು
- ತೆಂಗಿನಕಾಯಿ – ಸ್ವಲ್ಪ
- ಚಕ್ಕೆ – ಸಣ್ಣ ಚೂರು
- ಲವಂಗ – 2
- ದನ್ಯ ಪುಡಿ – 2 ಚಮಚ
- ಮೆಣಸಿನಕಾಯಿ ಪುಡಿ – 2 ಚಮಚ
- ಅರಿಶಿಣದ ಪುಡಿ – ½ ಚಮಚ
- ಮೊಳಕೆ ಕಟ್ಟಿದ ಕಾಳುಗಳು – 2 ಲೋಟ
{ಹುರುಳಿ ಕಾಳು (70%) ಅಲಸಂದೆಕಾಳು, ಹಸಿರುಕಾಳು, ಕಡಲೆಕಾಳು, ಅವರೆಕಾಳು (30%)}
ಮಾಡುವ ಬಗೆ
ಹುರುಳಿ ಕಾಳು, ಅಲಸಂದೆ ಕಾಳು, ಹಸಿರು ಕಾಳು, ಕಡಲೆ ಕಾಳು ಹಾಗೂ ಅವರೆಕಾಳನ್ನು ತೊಳೆದು ಒಂದು ರಾತ್ರಿ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ನೀರು ಸೋಸಿ, ಕಾಳುಗಳನ್ನು ಒಂದು ಬಟ್ಟೆಗೆ ಹಾಕಿ ಕಟ್ಟಿ. ಮಾರನೆ ದಿನ ಮೊಳಕೆ ಬರುತ್ತದೆ.
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿ, ಟೊಮೆಟೋ ಹಾಕಿ ಹುರಿಯಿರಿ. ಇದನ್ನು ಒಂದು ಜಾರ್ ಗೆ ಹಾಕಿ, ದನ್ಯ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿಣದ ಪುಡಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಕುಕ್ಕರ್ ಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಸ್ವಲ್ಪ ಹಾಕಿ, ಮೊಳಕೆ ಕಟ್ಟಿದ ಕಾಳುಗಳನ್ನು ಹಾಕಿ ಹುರಿದುಕೊಳ್ಳಿ. ನಂತರ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಸೇರಿಸಿ ಕುದಿಸಿ. ಒಂದು ಜಾರ್ ಗೆ ತೆಂಗಿನಕಾಯಿ, ಚಕ್ಕೆ, ಬೆಳ್ಳುಳ್ಳಿ, ಲವಂಗ, ಶುಂಟಿ ಹಾಗು ಕೊತ್ತಂಬರಿಸೊಪ್ಪು ಹಾಕಿ ರುಬ್ಬಿಕೊಂಡು ಇದಕ್ಕೆ ಸೇರಿಸಿ. ನಂತರ ಕತ್ತರಿಸಿದ ಆಲೂಗೆಡ್ಡೆ, ಬದನೆಕಾಯಿ ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಮೂರು ವಿಶಲ್ ಹೊಡೆಸಿ. ಈಗ ಚಾಮರಾಜನಗರ ಶೈಲಿಯ ಮೊಳಕೆ ಕಟ್ಟಿದ ಸಾರು ರೆಡಿ. ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು