ಕಿರುಗವಿತೆ: ಜಗದೊಡಲ ಸೊಗಸು

– ನಿತಿನ್ ಗೌಡ.

ಸುಂದರವಾಗಿದೆ ಹೂದೋಟದ ಸೊಗಸು,
ಮನಸೂರೆಯಾಗದೇನು? ಈ ನೋಟದಂದವು!
ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು..

ನಿರ್‍ಮಲವಾಗಿದೆ ಹರಿಯುವ ನೀರು;
ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ,
ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು..

ಹಚ್ಚ ಹಸಿರಾಗಿದೆ ಕಾನನ
ಕಡಿಯಲಾಗದು ಇದನು..

ಓಡುತಿದೆ ಹುಚ್ಚು ಮನಸು ಅಂಕುಶವಿಲ್ಲದೆ..
ಹಿಡಿಯಲಾಗದು ಇದನು..

ಎಲ್ಲವೂ ಹೇಗಿರುವವೋ
ಅದು ಹಾಗಿರಲು, ಅದರೊಳಗೆ ಅಡಗಿರುವುದು
ಜಗದೊಡಲ ಸೊಗಸು..

( ಚಿತ್ರಸೆಲೆ: copilot.microsoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *