ಮಾಡಿ ನೋಡಿ ಪಲಾಹಾರ (ಪ್ರೂಟ್ ಸಲಾಡ್)
– ಸವಿತಾ.
ಬೇಕಾಗುವ ಸಾಮಾನುಗಳು
- ಬೇಕಾದ ಹಣ್ಣಿನ ಹೋಳುಗಳು [ ಪಪ್ಪಾಯಿ, ಅನಾನಸ್, ಬಾಳೆ ಹಣ್ಣು, ಕಲ್ಲಗಂಡಿ ಇತ್ಯಾದಿ ] – 1 ಬಟ್ಟಲು
- ಹಾಲು – 1 ಲೋಟ
- ಬೆಲ್ಲ ಅತವಾ ಸಕ್ಕರೆ – 2 ಅತವಾ 3 ಚಮಚ
- ತಾವರೆ ಬೀಜ [ ಮಕಾನಾ ] – 15
- ಗೋಡಂಬಿ – 4
- ಬಾದಾಮಿ – 4
- ಒಣ ದ್ರಾಕ್ಶಿ – 10
- ಹಸಿ ಕೊಬ್ಬರಿ ಚೂರು – 2 ಚಮಚ
- ಏಲಕ್ಕಿ – 2
ಮಾಡುವ ಬಗೆ:
ಮೊದಲಿಗೆ ತಾವರೆ ಬೀಜ, ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ ಮತ್ತು ಹಸಿ ಕೊಬ್ಬರಿ ತುರಿಗೆ ಸ್ವಲ್ಪ ನೀರು ಸೇರಿಸಿ ಮಿಕ್ಸರ್ ನಲ್ಲಿ ಒಂದು ಸುತ್ತು ತಿರುಗಿಸಿ ಇಡಿ. ನಂತರ ಹಾಲು ಕಾಯಿಸಿ, ಮಿಕ್ಸರ್ ನಲ್ಲಿರುವ ಮಿಶ್ರಣ ಹಾಕಿ, ಸ್ವಲ್ಪ ನೀರು ಸೇರಿಸಿ ತೊಳೆದು ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಇದನ್ನು ಆರಲು ಇಡಿ. ಪಪ್ಪಾಯಿ, ಅನಾನಸ್, ಕಲ್ಲಂಗಡಿ ಇತ್ಯಾದಿ ಹಣ್ಣಿನ ಸಿಪ್ಪೆಗಳನ್ನು ತೆಗೆದು ಸಣ್ಣ ಹೋಳುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಈಗ ಆರಿದ ಹಾಲಿನ ಮಿಶ್ರಣ, ಹಣ್ಣಿನ ಹೋಳುಗಳು, ಏಲಕ್ಕಿ ಪುಡಿ ಕಲಸಿತ್ತುಕೊಳ್ಳಿರಿ ಮತ್ತು ಇದಕ್ಕೆ ಏಲಕ್ಕಿ ಪುಡಿ ಮಾಡಿ ಹಾಕಿ.
ಈಗ ರುಚಿಯಾದ ಪಲಾಹಾರ (ಪ್ರೂಟ್ ಸಲಾಡ್) ಸವಿಯಲು ಸಿದ್ದವಾಗಿದೆ.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು