ಒಬ್ಬಟ್ಟಿನ ಹುಳಿ
ಏನೇನು ಬೇಕು
- ಹುಣಸೆಹಣ್ಣು – ಸ್ವಲ್ಪ
- ಬೆಳ್ಳುಳ್ಳಿ – 4 ಎಸಳು
- ಸಾಸಿವೆ – ಸ್ವಲ್ಪ
- ಒಣ ಮೆಣಸಿನಕಾಯಿ – 2
- ಕರಿಬೇವಿನ ಸೊಪ್ಪು – ಸ್ವಲ್ಪ
- ತೆಂಗಿನಕಾಯಿ ತುರಿ – ಸ್ವಲ್ಪ
- ಕಡಲೆಬೇಳೆ ಬೇಯಿಸಿದ ನೀರು (ಒಬ್ಬಟ್ಟಿಗಾಗಿ ಬಳಸಿದ ಕಡಲೆಬೇಳೆ ಬೇಯಿಸಿದ ನೀರು)
ಮಾಡುವ ಬಗೆ
ಒಂದು ಪಾತ್ರೆಗೆ ಬೇಕಾದಶ್ಟು ನೀರು, ಹುಣಸೆಹಣ್ಣು ಹಾಕಿ ಕಲಸಿ. ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ಎಣ್ಣೆಗೆ ಸಾಸಿವೆ ಹಾಕಿ ನಂತರ ಬೆಳ್ಳುಳ್ಳಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಕರಿಯಿರಿ. ಇದಕ್ಕೆ ಹುಣಸೆಹುಳಿಯನ್ನು ಹಾಕಿ.
ನಂತರ 2 ಚಮಚ ಕಾರದ ಪುಡಿ ಹಾಕಿ, 10 ನಿಮಿಶ ಕುದಿಸಿ. ಈಗ ಕಡಲೆಬೇಳೆ ಬೇಯಿಸಿದ ನೀರು ಸೇರಿಸಿ ರುಚಿಗೆ ತಕ್ಕಶ್ಟು ಉಪ್ಪು ಬೆರೆಸಿ ಕುದಿಸಿ. ಈಗ ಒಬ್ಬಟ್ಟಿನ ಹುಳಿ ರೆಡಿ. ಒಬ್ಬಟ್ಟು ತಿಂದಮೇಲೆ, ಬಿಸಿ ಬಿಸಿ ಅನ್ನದೊಂದಿಗೆ ಸವಿದರೆ ಆಹಾ!
ಇತ್ತೀಚಿನ ಅನಿಸಿಕೆಗಳು