ಕಿರುಗವಿತೆಗಳು

– ನಿತಿನ್ ಗೌಡ.

ಮನದಾಲೋಚನೆಯ ಅಲೆಗಳು

ಹರಿಯುವವು ಮನದಾಲೋಚನೆಯ ಅಲೆಗಳು ಎಡೆಬಿಡದೆ..
ಕಟ್ಟುಹಾಕಲಾದೀತೆ ಇವುಗಳ ಹರಿವನು?
ಕಟ್ಟುಹಾಕಬಹುದೇನೋ ಒಂದೊಮ್ಮೆ!
ಹರಿಯಲು ಬಿಟ್ಟರೆ ತನ್ನಶ್ಟಕೆ ಇವುಗಳನು;
ತಡೆದುನಿಲ್ಲಿಸುವ ಬದಲು..

******

ಕಡಲಂಚು

ಕಡಲಂಚಲಿ ನಡೆಯುವುದು
ನೇಸರನ ಕಣ್ಣಾ ಮುಚ್ಚಾಲೆ;
ಹಗಲದು ನಲಿವಂತೆ, ಸೊಗಸಂತೆ!
ಇರುಳದು ನೋವಂತೆ, ಬಯವಂತೆ!
ಇರುಳೊಡಲ ಸೀಳಿ, ಹಗಲು ಇಣುಕದೇನು?
ಹಗಲ‌ ಮೊಗಕೆ, ಇರಳು ಪರದೆ ಎಳೆಯದೇನು ?
ಹಗಲು-ಇರುಳುಗಳು ಇವು ನೇಸರನ ಮಾಯೆ!
ನೋವು-ನಲಿವುಗಳಿವು ಇಹದ ಬದುಕ ಮಾಯೆ!
ಪಯಣವು ಸಾಗಬೇಕಿದೆ, ಈ ಆಟದಲಿ; ಎಡೆಬಿಡದೆ..
ಇದನರಿಯಲು ನಮ್ಮೊಳ ನಾವಿಕ;
ಸೇರುವನವ ಆಗ, ಮುಕುತಿಯ ದಡವ..

( ಚಿತ್ರಸೆಲೆ: chatgpt.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *