ಕಿತ್ತಳೆ ಹಣ್ಣಿನ ಮೊಹಿಟೊ
– ಸವಿತಾ.
ಏನೇನು ಬೇಕು
- ಕಿತ್ತಳೆ ಹಣ್ಣು – 1
- ನಿಂಬೆ ಹಣ್ಣು – 1
- ಸಕ್ಕರೆ – 2 ಚಮಚ
- ಉಪ್ಪು – 1/4 ಚಮಚ
- ಅಡುಗೆ ಸೋಡಾ – ಸ್ವಲ್ಪ
- ಪುದೀನಾ ಎಲೆ – 10
- ಹಸಿ ಶುಂಟಿ – 1 ಇಂಚು
- ಐಸ್ ಕ್ಯೂಬ್ – 2
- ನೀರು – 1 ದೊಡ್ಡ ಗ್ಲಾಸ್
ಮಾಡುವ ಬಗೆ
ಕಿತ್ತಳೆ ಹಣ್ಣಿನ ಅರ್ದ ಹೋಳು ರಸ ತೆಗೆದು ಇಡಿ. ಇನ್ನುಳಿದ ಅರ್ದ ಹೋಳು ಸಿಪ್ಪೆ ಸುಲಿದು ಒಂದು ದೊಡ್ಡ ಗ್ಲಾಸ್ ಗೆ ಹಾಕಿಕೊಳ್ಳಿರಿ. ನಿಂಬೆಹಣ್ಣು ಅರ್ದ ಹೋಳು ಕತ್ತರಿಸಿ ಇಟ್ಟುಕೊಳ್ಳಿ. ಉಳಿದ ಅರ್ದ ಸಣ್ಣದಾಗಿ ಕತ್ತರಿಸಿ ಗ್ಲಾಸ್ ನಲ್ಲಿ ಹಾಕಿರಿ. ಹಸಿ ಶುಂಟಿ ಸಿಪ್ಪೆ ತೆಗೆದು ಸಣ್ಣ ಕತ್ತರಿಸಿ ಅದೇ ಗ್ಲಾಸ್ ಗೆ ಹಾಕಿ, ಪುದೀನಾ ಸ್ವಲ್ಪ ಹಾಕಿರಿ. ಒಂದು ಕಟ್ಟಿಗೆ ಚಮಚ ಅತವಾ ಲಟ್ಟಣಿಗೆ ತುದಿಯಿಂದ ಎರಡು ಮೂರು ಸಲ ಒತ್ತಿ, ಆಮೇಲೆ ಉಪ್ಪು, ಸಕ್ಕರೆ, ಸ್ವಲ್ಪ ಅಡುಗೆ ಸೋಡಾ, ಕಿತ್ತಳೆ ಹಣ್ಣಿನ ರಸ, ತಣ್ಣನೆಯ ನೀರು ಮತ್ತು ಐಸ್ ಕ್ಯೂಬ್ ಹಾಕಿ. ಅಲಂಕಾರಕ್ಕೆ ತೆಳುವಾದ ನಿಂಬೆ ಹಣ್ಣಿನ ಹೋಳು ಕತ್ತರಿಸಿ ಗ್ಲಾಸ್ ಗೆ ಸಿಗಿಸಿರಿ. ಒಂದು ಪುದೀನಾ ಎಲೆಯನ್ನು ಗ್ಲಾಸ್ ಒಂದು ಬದಿಗೆ ಸಿಗಿಸಿರಿ. ಈಗ ತಂಪಾದ ಕಿತ್ತಳೆ ಹಣ್ಣಿನ ಮೊಹಿಟೊ ರೆಡಿ.ಬೇಸಿಗೆಯ ಬಿಸಿಲಿಗೆ ಸವಿದು ಆನಂದಿಸಿ.
ಇತ್ತೀಚಿನ ಅನಿಸಿಕೆಗಳು