ಮಾಡಿ ನೋಡಿ ಹಸಿರು ಕಬಾಬ್

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೋಳಿ ಮಾಂಸ – 500 ಗ್ರಾಂ
  • ಶುಂಟಿ ಬೆಳ್ಳುಳ್ಳಿ ಗಸಿ ಸ್ವಲ್ಪ
  • ಪುದಿನ – 1 ಕಪ್
  • ಕೊತ್ತಂಬರಿ ಸೊಪ್ಪು – 1 ಕಪ್
  • ಹಸಿರು ಮೆಣಸಿನಕಾಯಿ  – 8-10 (ಕಾರದ ಪ್ರಮಾಣಕ್ಕೆ ತಕ್ಕಂತೆ)
  • ನಿಂಬೆಹಣ್ಣು – 1/2
  • ಗರಂ ಮಸಾಲ  – 1 ಚಮಚ
  • ಕರಿಮೆಣಸಿನ ಪುಡಿ – 1 ಚಮಚ
  • ಅರಿಶಿನ ಪುಡಿ  – 1/4 ಚಮಚ
  • ಕಸ್ತೂರಿ ಮೆಂತೆ – 1 ಚಮಚ
  • ಮೈದಾ  – 1 ಚಮಚ
  • ಜೋಳದ ಪುಡಿ ( ಕಾರ‍್ನ್ ) – 3 ಚಮಚ  ( ಗರಿ ಗರಿ ಬರಲು )
  • ಮೊಟ್ಟೆಯ ಬಿಳಿಬಾಗ – 1
  • ಉಪ್ಪು  – ರುಚಿಗೆ ತಕ್ಕಷ್ಟು
  • ಎಣ್ಣೆ  – ಕಬಾಬ್ ಕರಿಯಲು ಬೇಕಾಗುವಶ್ಟು

ಚೆಂದಕಾಣಿಸಲು

  • ನಿಂಬೆ ಹಣ್ಣು – 1
  • ಈರುಳ್ಳಿ – 1
  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಕೋಳಿ ಮಾಂಸವನ್ನು ಹೆಚ್ಚಿಕೊಳ್ಳಿರಿ. ಆಮೇಲೆ ಪುದೀನ, ಕೊತ್ತಂಬರಿ ಸೊಪ್ಪು, ಮತ್ತು ಹಸಿರು ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ರುಬ್ಬಿಕೊಳ್ಳಿ. ಈಗ ಕೋಳಿ ಮಾಂಸಕ್ಕೆ ರುಬ್ಬಿದ ಸೊಪ್ಪು, ಶುಂಟಿ ಬೆಳ್ಳುಳ್ಳಿ ಗಸಿ, ನಿಂಬೆರಸ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಅರಿಶಿನ ಪುಡಿ, ಕಸ್ತೂರಿ ಮೆಂತೆ, ಮೈದಾ, ಕಾರ‍್ನ್ ಪ್ಲೋರ್, ಮೊಟ್ಟೆಯ ಬಿಳಿಬಾಗ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಇದನ್ನು ಅರ‍್ದ ಗಂಟೆ ಹಾಗೇ ಇಡಿ. ಆಮೇಲೆ ಒಂದು ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಇದನ್ನು ನಡು ಒಲೆಯುರಿಯಲ್ಲಿ ಗರಿ ಗರಿಯಾಗಿ ಕರೆದು ತೆಗೆಯಿರಿ. ಈಗ ಬಾಯಲ್ಲಿ ನೀರೂರಿಸುವ ಹಸಿರು ಕಬಾಬ್ ತಯಾರಿದ್ದು, ಇದನ್ನು ಚೆಂದಕಾಣಿಸಲು ದುಂಡಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ಹೋಳುಗಳನ್ನು ಅದರ ಸುತ್ತ ಇಡಬಹುದು.

( ಚಿತ್ರಸೆಲೆ: chatpgt.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *