ಮಾಡಿ ಸವಿಯಿರಿ ಕುರಿ ಕಾಲು ಸೂಪು
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಮಟನ್ ಕಾಲು – 2 ರಿಂದ 4 (ತೊಳೆದು ಸಿದ್ದಮಾಡಿದ)
- ನೀರು – 1 ರಿಂದ 1.5 ಲೀಟರ್
- ತುಪ್ಪ – 2 ಚಮಚ
- ಶುಂಟಿ ಬೆಳ್ಳುಳ್ಳಿ ಗಸಿ – 1.5 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಚಕ್ಕೆ – 1 ಇಂಚಿನ ತುಂಡು
- ಏಲಕ್ಕಿ – 1
- ಲವಂಗ – 4
- ಬಿರಿಯಾನಿ ಎಲೆ – 2
- ಕಾಳು ಮೆಣಸು – 10–12
- ಹಸಿ ಕೊತ್ತಂಬರಿ ಸೊಪ್ಪು – ಸ್ವಲ್ಪ (ಚೆಂದ ಕಾಣಿಸಲು)
- ಹಸಿ ಮೆಣಸು – 3 (ಸಿಗಿದು ಮಾಡಿದರೆ ಹೆಚ್ಚು ರುಚಿ)
- ಹಳದಿ ಪುಡಿ – ½ ಟೀ ಚಮಚ
- ಜೀರಿಗೆ – ಸ್ಚಲ್ಪ
ಮಾಡುವ ಬಗೆ
ಮೊದಲಿಗೆ ಒಂದು ಕುಕ್ಕರ್ ಗೆ ಎರಡು ಚಮಚ ತುಪ್ಪ ಹಾಕಿರಿ. ಅದಕ್ಕೆ ಏಲಕ್ಕಿ, ಲವಂಗ, ಚಕ್ಕೆ, ಬಿರಿಯಾನಿ ಎಲೆ, ಕಾಳು ಮೆಣಸು, ಹಸಿ ಮೆಣಸು ಹುರಿಯಿರಿ. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ, ಶುಂಟಿ ಬೆಳ್ಳುಳ್ಳಿ ಗಸಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಬಾಡಿಸಿ. ಈಗ ಇದಕ್ಕೆ ತೊಳೆದು ಶುಚಿಮಾಡಿಕೊಂಡ ಕುರಿಕಾಲು, ಉಪ್ಪು, ಅರಿಶಿಣ ಹಾಕಿ. ಈಗ ಇದಕ್ಕೆ ನೀರು ಹಾಕಿ ಎಂಟು ಸೀಟಿ ಹೊಡಿಸಿ ಒಲೆ ಆರಿಸಿ. ಈಗ ಇದಕೆ ಕೊತ್ತಂಬರಿ ಎಲೆ ಹೆಚ್ಚಿ ಹಾಕಿ, ಕಪ್ಪಿನಲ್ಲಿ ಹಾಕಿಕೊಂಡು ಸವಿಯಿರಿ.
ಇನ್ನೊಂದು ಬಗೆ: ಬೇಕಾದ್ದಲ್ಲಿ ಹುರಿದುಕೊಂಡ ಚಕ್ಕೆ, ಲವಂಗ ಇತ್ಯಾದಿ ಮಸಾಲೆ ಪದಾರ್ತ, ಜೀರಿಗೆ, ಶುಂಟಿ ಬೆಳ್ಳುಳ್ಳಿ ಗಸಿ ಮತ್ತು ಈರುಳ್ಳಿ ಇವುಗಳನ್ನು ರುಬ್ಬಿಟ್ಟು ಕೊಳ್ಳಿರಿ. ಈಗ ಕುಕ್ಕರ್ ಗೆ ಎಣ್ಣೆ, ಕುರಿ ಕಾಲು, ಅರಿಶಿಣ ಮತ್ತು ಉಪ್ಪು ಹಾಕಿ ಹುರಿದುಕೊಳ್ಳಿರಿ. ಇದಕ್ಕೆ ನೀರು, ರುಬ್ಬಿಕೊಂಡ ಗಸಿ ಹಾಕಿ ಅಲ್ಲಾಡಿಸಿ, ಕುಕ್ಕರ್ ಒಂದು ಎಂಟು ವಿಶೆಲ್ ಹೊಡಿಸಿ ಆರಿಸಿ.
(ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು