ಮಾಡಿ ನೋಡಿ ಪಾಲಕ್ ತಂಬುಳಿ
ಏನೇನು ಬೇಕು ?
- ಪಾಲಕ್ ಸೊಪ್ಪು – 400 ಗ್ರಾಂ
- ಮೊಸರು – 1/2 ಲೀಟರ್
- ಈರುಳ್ಳಿ – 1 ಮದ್ಯಮ ಗಾತ್ರದ್ದು
- ಮೆಣಸಿನ ಪುಡಿ – 1/2 ಚಮಚ
- ಗರಂ ಮಸಾಲಾ – 1/4 ಚಮಚ
- ದನಿಯಾ ಪುಡಿ – 1/4 ಚಮಚ
- 3-4 ಕೆಂಪು ಮೆಣಸಿನಕಾಯಿಗಳು
- ಎಣ್ಣೆ – 2 ಟೇಬಲ್ಸ್ಪೂನ್ (ಒಗ್ಗರಣೆ ಮತ್ತು ಹುರಿಯಲು)
- ಕರಿಬೇವಿನ ಎಲೆಗಳು – ಕೆಲವು ಎಸಳು
- ಸಾಸಿವೆ – 1/2 ಚಮಚ
- ಇಂಗು – ಒಂದು ಚಿಟಿಕೆ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ:
ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಈಗ ಎಣ್ಣೆ ಬಿಸಿಯಾದ ನಂತರ ಸಾಸಿವೆ, ಇಂಗು, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ, ಈರುಳ್ಳಿ ಚೆನ್ನಾಗಿ ಬೇಯುವವರೆಗೆ ಹುರಿಯಿರಿ. ಇದಕ್ಕೆ ಪಾಲಕ್ ಸೊಪ್ಪನ್ನು ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಸುಮಾರು ಒಂದು ಕಪ್ ನೀರು ಸೇರಿಸಿ, ಪಾಲಕ್ ಸೊಪ್ಪು ಚೆನ್ನಾಗಿ ಬೇಯುವವರೆಗೆ ಕುದಿಸಿ. ಇಲ್ಲಿ ಉರಿಯನ್ನು ಹೆಚ್ಚಿಸಬೇಡಿ. ಪಾಲಕ್ ಸೊಪ್ಪು ಬೆಂದ ನಂತರ, ಗರಂ ಮಸಾಲಾ, ದನಿಯಾ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆ ಆಪ್ ಮಾಡಿ ಮತ್ತು ಮಿಶ್ರಣವನ್ನು ಸಂಪೂರ‍್ಣವಾಗಿ ತಣ್ಣಗಾಗಲು ಬಿಡಿ. ಮಿಶ್ರಣ ಸಂಪೂರ‍್ಣವಾಗಿ ತಣ್ಣಗಾದ ನಂತರವಶ್ಟೇ, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ರುಚಿಕರವಾದ ಪಾಲಕ್ ತಂಬುಳಿ ಬಡಿಸಲು ಸಿದ್ದವಾಗಿದೆ. ಇದು ಬೇಸಿಗೆಯ ಬಸಿಲಿನಿಂದಾಗುವ ದಾಹವನ್ನು ಕಡಿಮೆ ಮಾಡಲು ಅತ್ಯುತ್ತಮವಾದ ಪದಾರ‍್ತವಾಗಿದೆ.
(ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು