ಮಂಗಳೂರು ಮೀನ್ ಸಾರು

ಪ್ರೇಮ ಯಶವಂತ.

photo
ಬೇಕಾಗುವ ಅಡಕಗಳು:
ಕತ್ತರಿಸಿದ ಮೀನು –½ kg
ಒಣ ಮೆಣಸಿನಕಾಯಿ – 10-12
ಹುಣಸೆಹಣ್ಣು – 1 ನಿಂಬೆ ಗಾತ್ರದ್ದು
ಅರಿಶಿನ ಪುಡಿ – ½ ಚಮಚ
ಮೆಂತ್ಯೆ ಕಾಳು – 1/3 ಚಮಚ
ಕೊತ್ತಂಬರಿ ಬೀಜ – 2 ಚಮಚ
ಕರಿ ಮೆಣಸು – 1 ಚಮಚ
ತೆಂಗಿನಕಾಯಿ ತುರಿ- ¾ ಬಟ್ಟಲು
ಹಸಿ ಮೆಣಸಿನಕಾಯಿ – 2-3
ಶುಂಟಿ – ½ ಇಂಚು, ಸಣ್ಣಗೆ ಹೆಚ್ಚಿದ್ದು
ಈರುಳ್ಳಿ- 1 ಸಣ್ಣಗೆ ಹೆಚ್ಚಿದ್ದು
ಈರುಳ್ಳಿ- 1 ಉದ್ದಕ್ಕೆ ಹೆಚ್ಚಿದ್ದು
ಬೆಳ್ಳುಳ್ಳಿ – 5 ಎಸಳು ಸಣ್ಣಗೆ ಹೆಚ್ಚಿದ್ದು
ಕರಿಬೇವು
ಕೊಬ್ಬರಿ ಎಣ್ಣೆ ಅತವ ಅಡಿಗೆ ಎಣ್ಣೆ – 3 ದೊಡ್ಡ ಚಮಚ
ಉಪ್ಪು- ರುಚಿಗೆ ತಕ್ಕಶ್ಟು

ಮಾಡುವ ಬಗೆ :
ಮೊದಲಿಗೆ ಒಣ ಮೆಣಸಿನಕಾಯಿ, ಮೆಂತ್ಯೆ ಕಾಳು, ಕೊತ್ತಂಬರಿ ಬೀಜ ಹಾಗು ಕರಿ ಮೆಣಸುಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಹೀಗೆ ಹುರಿದು ಕೊಂಡದ್ದನ್ನು ಅರಿಶಿನ ಪುಡಿ, ಕಾಯಿ ತುರಿ, ಹುಣಸೆಹಣ್ಣು ಮತ್ತು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಬೇಯಲು ಬಿಡಿ. ಈರುಳ್ಳಿ ಸ್ವಲ್ಪ ಕಂದು ಬಣ್ಣ ತಿರುಗಿದ ಮೇಲೆ ಕರಿಬೇವು, ರುಬ್ಬಿಕೊಂಡ ಮಸಾಲೆ, ಹಸಿ ಮೆಣಸಿನಕಾಯಿ, ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಮತ್ತು ಶುಂಟಿಯನ್ನು ಬೆರೆಸಿ. ಇದಕ್ಕೆ ಬೇಕಾದಶ್ಟು ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 5-10 ನಿಮಿಶ ಕುದಿಯಲು ಬಿಡಿ. ಈಗ ಕತ್ತರಿಸಿದ ಮೀನನ್ನು ಹಾಕಿ 8-10 ನಿಮಿಶ ಇಲ್ಲವೇ ಮೀನು ಬೇಯುವವರೆಗು ಸಣ್ಣ ಉರಿಯಲ್ಲಿ ಕುದಿಸಿರಿ. ಬಿಸಿ ಬಿಸಿ ಮೀನ್ ಸಾರು ಅನ್ನ, ಆಪಮ್ ಅತವ ಇಡ್ಲಿಯ ಜೊತೆ ಸವಿಯಲು ಸಿದ್ದ.
(ಮಾಹಿತಿ ಸೆಲೆ: khanakhazana.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: