ಕೊಟ್ಟೆ ಕಡುಬು
ಏನೇನು ಬೇಕು
- ದೋಸೆ ಅಕ್ಕಿ – 1 ಬಟ್ಟಲು
- ಉದ್ದಿನ ಬೇಳೆ – 1 ಬಟ್ಟಲು
- ಹಲಸಿನ ಎಲೆ (ಕೊಟ್ಟೆ ಕಟ್ಟಲು)
ಮಾಡುವ ಬಗೆ
ಉದ್ದಿನ ಬೇಳೆಯನ್ನು 3 ಗಂಟೆ ನೀರಿನಲ್ಲಿ ನೆನೆಸಿ, ಗ್ರೈಂಡರ್ ನಲ್ಲಿ ಇಡ್ಲಿಗೆ ರುಬ್ಬುವಂತೆ, ರುಬ್ಬಿಕೊಳ್ಳಬೇಕು. ದೋಸೆ ಅಕ್ಕಿಯನ್ನು 3 ಗಂಟೆ ನೀರಿನಲ್ಲಿ ನೆನೆಸಿ, ನೆರಳಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಂಡು, ರುಬ್ಬಿಕೊಂಡ ಉದ್ದಿನ ಬೇಳೆ ಹಿಟ್ಟಿನ ಜೊತೆ ಬೆರೆಸಿ, ಸ್ವಲ್ಪ ಉಪ್ಪು ಸೇರಿಸಿ ರಾತ್ರಿ ಇಡಬೇಕು (8 ಗಂಟೆಗಳು).
ಮರುದಿನ ಹಲಸಿನ ಎಲೆಯ ಕೊಟ್ಟೆಗಳನ್ನು ಮಾಡಿ, ಕೊಟ್ಟೆಗಳಿಗೆ ಹಿಟ್ಟು ಹಾಕಿ, ಕಡುಬಿನ ಅಟ್ಟದಲ್ಲಿ ಇಟ್ಟು, ½ ಗಂಟೆ ಹಬೆಯಲ್ಲಿ ಬೇಯಿಸಬೇಕು. ಈಗ ಕರಾವಳಿಯ ಕೊಟ್ಟೆ ಕಡುಬು ಸವಿಯಲು ಸಿದ್ದ. ಇದನ್ನು ಅಮಟೆಕಾಯಿ ಚಟ್ನಿ ಜೊತೆ ಸವಿದರೆ ಇನ್ನೂ ಚೆನ್ನ.
ಇತ್ತೀಚಿನ ಅನಿಸಿಕೆಗಳು