ಮಾಡಿ ನೋಡಿ ಮುಂಬೈ ದಾಲ್
ಬೇಕಾಗುವ ಸಾಮಾನುಗಳು:
- ಆಲೂಗಡ್ಡೆ – 2 (ಬೇಯಿಸಿ ಸಿಪ್ಪೆ ತೆಗೆದು ಇಟ್ಟುಕೊಳ್ಳಿ)
- ಈರುಳ್ಳಿ – 2
- ಟೊಮೆಟೊ – 1
- ಕರಿಬೇವು
- ಕೊತ್ತಂಬರಿ ಸೊಪ್ಪು
- ಒಗ್ಗರಣೆಗೆ ಸಾಸಿವೆ
- ಎಣ್ಣೆ – ಸ್ವಲ್ಪ
- ಕಡಲೆ ಹಿಟ್ಟು – 2 ಚಮಚ
- ರುಚಿಗೆ ತಕ್ಕಶ್ಟು ಉಪ್ಪು
- ಹಸಿಮೆಣಸಿನಕಾಯಿ – 5
- ಅರಿಶಿಣ – ಒಂದು ಚಿಟಿಕೆ
- ಇಂಗು – ಒಂದು ಚಿಟಿಕೆ
ಮಾಡುವ ಬಗೆ:
ಮೊದಲಿಗೆ, ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಕರಿಬೇವು ಮತ್ತು ಇಂಗು ಹಾಕಿ. ಕರಿಬೇವು ಪರಿಮಳ ಬೀರುವಾಗ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಸೇರಿಸಿ, ಅದು ಮೆತ್ತಗಾಗುವವರೆಗೆ ಹುರಿಯಿರಿ. ಈಗ ಬೇಯಿಸಿದ ಆಲೂಗಡ್ಡೆಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಸೇರಿಸಿ. ಇದಕ್ಕೆ ರುಚಿಗೆ ತಕ್ಕಶ್ಟು ಉಪ್ಪು ಮತ್ತು ಅರಿಶಿಣ ಹಾಕಿ. ಉರಿಯನ್ನು ಕಡಿಮೆ ಇರಿಸಿ, ಇಲ್ಲದಿದ್ದರೆ ತಳ ಹಿಡಿಯಬಹುದು.
ಈಗ ಒಂದು ಸಣ್ಣ ಬಟ್ಟಲಿನಲ್ಲಿ 2 ಚಮಚ ಕಡಲೆ ಹಿಟ್ಟಿಗೆ ನೀರು ಸೇರಿಸಿ, ಗಂಟುಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ದ್ರಾವಣ ತಯಾರಿಸಿಕೊಳ್ಳಿ. ಇದನ್ನು ಆಲೂಗಡ್ಡೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ಕಡಿಮೆ ಉರಿಯಲ್ಲಿ ಇದನ್ನು ಮಾಡಬೇಕು. ಇದಕ್ಕೆ ರುಚಿಗೆ ತಕ್ಕಶ್ಟು ಉಪ್ಪು ಹಾಕಿ. ನಿಮಗೆ ಬೇಕಾದ ಹದಕ್ಕೆ ಅನುಗುಣವಾಗಿ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
ಮಿಶ್ರಣ ಕುದಿ ಬಂದ ನಂತರ ಒಲೆ ಆರಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದನ್ನು ಬಿಸಿಬಿಸಿ ಅನ್ನ ಅತವಾ ಚಪಾತಿಯೊಂದಿಗೆ ಸವಿಯಬಹುದು.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು