ಮಾಡಿ ನೋಡಿ ಪಾನಿಪೂರಿ ಮತ್ತು ಗೋಲುಗುಪ್ಪ

– ನಿತಿನ್ ಗೌಡ

ಬೇಕಾಗುವ ಸಾಮಾನುಗಳು

  • ಹಸಿಮೆಣಸು‌- ಕಾರಕ್ಕೆ ಅನುಗುಣವಾಗಿ
  • ಪುದೀನ – ಒಂದು ಹಿಡಿ/ಅರ‌್ದ ಕಟ್ಟು
  • ಕೊತ್ತಂಬರಿ – ಅರ‌್ದ ಕಟ್ಟು
  • ಹುಣಸೆ ಹಣ್ಣಿನ ರಸ – ನಾಲ್ಕು‌ ಚಮಚ
  • ಶುಂಟಿ- 1 ಇಂಚು
  • ಬೆಳ್ಳುಳ್ಳಿ – 10 ರಿಂದ 15 ಎಸಳು
  • ಚಾಟ್ ಮಸಾಲೆ – 1 ಚಮಚ
  • ಪಾನಿಪೂರಿ ಮಸಾಲೆ – 1 ಚಮಚ
  • ಬೇಯಿಸಿದ ಆಲೂಗಡ್ಡೆ – 3
  • ಈರುಳ್ಳಿ – 3 ರಿಂದ 4
  • ಬೇಯಿಸಿದ ಬಟಾಣಿ – 3 ಕಪ್ಪು
  • ಉಪ್ಪು – ರುಚಿಗೆ ತಕ್ಕಶ್ಟು
  • ಬೆಲ್ಲ – ಸ್ವಲ್ಪ
  • ಕಾರಸೇವು – 250 ಗ್ರಾಂ
  • ಶೇಂಗ (ಎಣ್ಣೆಯಲ್ಲಿ ಕರೆದದ್ದು) – 100 ಗ್ರಾಂ
  • ಟೋಮೋಟೋ – 2
  • ಕಾರದ ಪುಡಿ – ಒಂದು ಚಮಚ
  • ನಿಂಬೆ ರಸ- 1
  • ಪೂರಿ – 30

ಮಾಡುವ ಬಗೆ

ಮೊದಲಿಗೆ ಹಸಿಮೆಣಸು, ಪುದೀನ, ಕೊತ್ತಂಬರಿ, ಹುಣಸೆ ಹಣ್ಣಿನ ರಸ, ಶುಂಟಿ ಮತ್ತು ಬೆಳ್ಳುಳ್ಳಿ ಇವಿಶ್ಟನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿರಿ. ಈಗ ಇದಕ್ಕೆ ಪಾನಿಪೂರಿ ಮಸಾಲೆ, ಚಾಟ್ ಮಸಾಲೆ, ಚೂರು ಬೆಲ್ಲ ಮತ್ತು ರುಚಿಗೆ ತಕ್ಕಶ್ಟು ಉಪ್ಪು‌ಹಾಕಿರಿ. ಈಗ ಪಾನಿ ತಯಾರಾಗಿದೆ.
ಇನ್ನೊಂದು ಕಡೆ, ಆಲೂಗಡ್ಡೆ ಮತ್ತು ಬಟಾಣಿಯನ್ನು ಬೇರೆ ಬೇರೆಯಾಗಿ ಬೇಯಿಸಿಕೊಳ್ಳಿರಿ. ಜೊತೆಗೆ ಈರುಳ್ಳಿ, ಟೋಮೋಟೋ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿರಿ. ಈಗ ಪೂರಿಯನ್ನು ಎಣ್ಣೆಯಲ್ಲಿ ಕರೆದುಕೊಳ್ಳಿರಿ.

ಗೋಲುಗುಪ್ಪಕ್ಕೆ:

ಈಗ ಆಲೂಗಡ್ಡೆಯನ್ನು ನುಣ್ಣಗೆ ನುರಿದುಕೊಳ್ಳಿರಿ. ಇದಕ್ಕೆ ಸ್ವಲ್ಲ ಈರುಳ್ಳಿ,ಚಾಟ್ ಮಾಸಾಲೆ, ನಿಂಬೆ ರಸ, ಉಪ್ಪು, ಕಾರದ ಪುಡಿ ಹಾಕಿ ಕಲಸಿರಿ. ಈಗ ಇದನ್ನು ಒಂದೊಂದೆ ಪೂರಿಯೊಳಗೆ ಸೇರಿಸಿರಿ. ನಂತರ ಇದನ್ನು ಪಾನಿಯಲ್ಲಿ ಅದ್ದಿ ತಿನ್ನಲು ಸೊಗಸಾಗಿರುತ್ತದೆ‌.

ಪಾನಿಪೂರಿಗೆ:

ಈಗ ಕರಿದುಕೊಂಡ ಪೂರಿಗೆ ಚಿಕ್ಕದಾಗಿ ತೂತು ಮಾಡಿ, ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ,ಪಾನಿಪೂರಿ/ಬೇಯಿಸಿಕೊಂಡ ಬಟಾಣಿ, ಸೇವು, ಕರಿದ ಶೇಂಗಾ ಹಾಕಿರಿ. ಜೊತೆಗೆ ಒಂದು ಚಿಕ್ಕ ಕಪ್ಪಿಗೆ ಪಾನಿ ಹಾಕಿ ಸವಿಯಲು ನೀಡಿರಿ.

(ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *