ಗಾಜಾ ನೆಲದ ಮಕ್ಕಳು

– ಶರೀಪ ಗಂ ಚಿಗಳ್ಳಿ.

ರಣ ಬೀಕರ ಶಸ್ತ್ರ ದಾಳಿಗೆ ಗಾಜಾ ನಲುಗಿದೆ
ಮಕ್ಕಳು ಮಲಗುವ ಕಟ್ಟಡಗಳು ದರೆಗುರುಳಿವೆ
ಎಳೆಯರು ಉಸಿರಾಡಲು ವಿಶ ಅನಿಲ ತುಂಬಿದೆ
ಕರ‍್ಕಶ ಶಬ್ದಕ್ಕೆ ಮಕ್ಕಳ ಹ್ರುದಯ ಕಿವಿ ಹರದಿವೆ

ಚಳಿ, ಮಳೆ, ಕಿಟಗಳ ಕಡಿತಕ್ಕೆ ಮಕ್ಕಳಿಗೆ ನಿದ್ದೆ ಇಲ್ಲಾ
ಕಿತ್ತು ತಿನ್ನುತ್ತಿದೆ ಹಸಿವು ಕಂದಮ್ಮಗಳಿಗೆ ಹಾಲಿಲ್ಲಾ
ನೆರವಿಗೆ ಬರುತ್ತಿಲ್ಲಾ ವಿಶ್ವದ ಮಕ್ಕಳ ಹಕ್ಕುಗಳು
ಸ್ವಾಬಿಮಾನ ಕಳಚಿದೆ ವಿದೇಶಿ ಸಹಾಯ ಬಿಕ್ಶೆಯಾಗಿದೆ

ಬಾಂಬ್ ದಾಳಿಗೆ ಮಕ್ಕಳ ಕೈ ಕಾಲು ಕತ್ತರಿಸಿವೆ
ಶಾಲೆಗಳು ಪುಡಿಗಟ್ಟಿವೆ ಮಕ್ಕಳ ಶಿಕ್ಶಣ ನೆಲ ಕಚ್ಚಿದೆ
ಗಾಜಾ ಮಕ್ಕಳ ಬವಿಶ್ಯದ ಕನಸು ಕಮರಿ ಹೋಗಿದೆ
ಯುದ್ದ ದಾಹಕ್ಕೆ ಮಕ್ಕಳ ಶವ ಯಾತ್ರೆ ನಡೆದಿದೆ

ವಿಶ್ವದ ಮಕ್ಕಳ ಹಕ್ಕುಗಳು ಉಲ್ಲಂಗನೆಯಾಗಿದೆ
ಬೆಳೆಯುವ ಮಕ್ಕಳಿಗೆ ಮುಕ್ತ ಪರಿಸರ ಕಲ್ಪಿಸಬೇಕಿದೆ
ಪೆನ್ ಹಿಡಿಯುವ ಕೈಗೆ ಪ್ರತಿಕಾರದ ಶಸ್ತ್ರ ನೀಡಬೇಡಿ
ಮಕ್ಕಳಿಗು ಬದುಕಿದೆ ಉಜ್ವಲ ಬವಿಶ್ಯ ನೀಡಿ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *