ಕವಿತೆ: ಗೆಳೆತನವ ಸಂಬ್ರಮಿಸೋಣ

– ಶ್ಯಾಮಲಶ್ರೀ.ಕೆ.ಎಸ್.friends, friendship, ಗೆಳೆಯರು, ಗೆಳೆತನ, ಸ್ನೇಹ

ಅದಾವ ಬಂದವೋ
ಅರಿಯದೇ ಬೆಸೆವುದು
ಪ್ರೀತಿ ಸಲುಗೆಯಿಂದ
ನಿರ‍್ಮಲ ಬಾವದಿಂದ
ಮನವ ಕೂಗಿ ಕರೆವುದು

ಮೊದಲಿಲ್ಲ ಕೊನೆಯಿಲ್ಲ
ಸಿರಿತನದ ಅಮಲಿಲ್ಲ
ಬಡತನದ ಸುಳಿವಿಲ್ಲ
ಬೇದ ಬಾವಗಳ ಹಂಗಿಲ್ಲ
ಈ ಸ್ನೇಹ ಬೆಸುಗೆಗೆ

ಮಾತಿನೋಕುಳಿಯ ಚೆಲ್ಲಿ
ತಿಳಿಹಾಸ್ಯದ ಹೊನಲಿನಲ್ಲಿ
ಜಂಜಾಟಗಳ ಮರೆಯಲ್ಲಿ
ಮನವ ಹಗುರಾಗಿಸುವುದು
ಈ ಮದುರ ಮೈತ್ರಿ

ಸಜ್ಜನರೊಡನೆ ಬೆರೆತು
ದುರುಳತೆಯ ದೂರವಿತ್ತು
ಸುವಿಚಾರದ ಸವಿಯಲ್ಲಿ
ಗೆಳೆತನವ ಸಂಬ್ರಮಿಸೋಣ
ಬದುಕ ಸಾರ‍್ತಕವಾಗಿಸೋಣ

(ಚಿತ್ರ ಸೆಲೆ: maxpixel.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks