ಸಾಬೂದಾನಿ ಒಗ್ಗರಣೆ
– ಸವಿತಾ.
ಬೇಕಾಗುವ ಸಾಮಾನುಗಳು
- ಸಾಬೂದಾನಿ – 3 ಲೋಟ
- ಕಡಲೇಬೀಜ ( ಶೇಂಗಾ ) – 4 ಚಮಚ
- ಕರಿಬೇವು ಸ್ವಲ್ಪ
- ಹಸಿ ಶುಂಟಿ ಸ್ವಲ್ಪ
- ಎಣ್ಣೆ – 3 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಸ್ವಲ್ಪ
- ಗರಮ್ ಮಸಾಲಾ ಪುಡಿ – 1 ಚಮಚ
- ಹಸಿ ಮೆಣಸಿನ ಕಾಯಿ – 2
- ಈರುಳ್ಳಿ – 1
- ಸಾಸಿವೆ – ಅರ್ದ ಚಮಚ
- ಜೀರಿಗೆ – ಅರ್ದ ಚಮಚ
- ಇಂಗು ಸ್ವಲ್ಪ
- ನಿಂಬೆ ಹಣ್ಣಿನ ರಸ – ಅರ್ದ ಹೋಳು
- ಸಕ್ಕರೆ – ಅರ್ದ ಚಮಚ
ಮಾಡುವ ಬಗೆ:
ಮೊದಲಿಗೆ ಸಾಬೂದಾನಿ ತೊಳೆದು, ಪಾತ್ರೆಯಲ್ಲಿ ಅರ್ದ ಇಂಚು ಬರುವಶ್ಟು ನೀರು ಹಾಕಿ ಹಿಂದಿನ ದಿನ ನೆನೆ ಇಡಬೇಕು( ಅಂದಾಜು 7-8 ತಾಸು ಇಡಬಹುದು). ಮರುದಿನ ನೆನೆದ ಸಾಬೂದಾನಿಗೆ ಗರಮ್ ಮಸಾಲೆ ಪುಡಿ ಮತ್ತು ಉಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಇಡಿ. ನಂತರ ಶೇಂಗಾ ಹುರಿದು ಪುಡಿ ಮಾಡಿಟ್ಟುಕೊಳ್ಳಿರಿ. ನಂತರ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಬೇಕು. ಈಗ ಕರಿಬೇವು ಸ್ವಲ್ಪ, ಇಂಗು ಸ್ವಲ್ಪ, ಸಾಸಿವೆ, ಜೀರಿಗೆ ನಂತರ ಕತ್ತರಿಸಿದ ಹಸಿ ಶುಂಟಿ, ಕತ್ತರಿಸಿದ ಹಸಿ ಮೆಣಸಿನ ಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ನಂತರ ಸ್ವಲ್ಪ ಅರಿಶಿಣ ಮತ್ತು ಕಡಲೇಬೀಜದ ಪುಡಿ, ನೆನೆಸಿದ ಸಾಬೂದಾನಿ ಹಾಕಿ ಸಣ್ಣ ಉರಿಯಲ್ಲಿಟ್ಟು ಸಾಬೂದಾನಿಯನ್ನು ಸ್ವಲ್ಪ ಬೇಯಿಸಿರಿ. ಕೊನೆಗೆ ಸಕ್ಕರೆ ಹಾಕಿ ಕಲಸಿ ಒಲೆ ಆರಿಸಿ. ಈಗ ಬೆಳಗಿನ ತಿಂಡಿಗೆ ಅತವಾ ಸಾಯಂಕಾಲ ಸವಿಯುವಂತಹ ಸರಳ, ಆರೋಗ್ಯಕರ ಸಾಬೂದಾನಿ ಒಗ್ಗರಣೆ ತಯಾರಾಗಿದೆ.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು