ಮಾಡಿನೋಡಿ ಸಬ್ಬಸಿಗೆ ಸೊಪ್ಪಿನ ಅನ್ನ
– ಸವಿತಾ.
ಬೇಕಾಗುವ ಪದಾರ‍್ತಗಳು:
- ಸಬ್ಬಸಿಗೆ ಸೊಪ್ಪು – ಅರ‍್ದ ಕಟ್ಟು
- ಈರುಳ್ಳಿ – 1
- ಟೊಮೊಟೋ – 1
- ದಪ್ಪ ಮೆಣಸಿನಕಾಯಿ – 1
- ಆಲೂಗಡ್ಡೆ – 1
- ಹಸಿ ಮೆಣಸಿನಕಾಯಿ – 2
- ಹಸಿ ಶುಂಟಿ – ಕಾಲು ಇಂಚು
- ಬೆಳ್ಳುಳ್ಳಿ ಎಸಳು – 6
- ಕರಿಬೇವು ಸ್ವಲ್ಪ
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಹಸಿ ಕೊಬ್ಬರಿ ತುರಿ – ಅರ್‍ದ ಬಟ್ಟಲು
- ಗರಮ್ ಮಸಾಲೆ ಪುಡಿ – ಅರ್‍ದ ಚಮಚ
- ಎಣ್ಣೆ – 4 ಚಮಚ
- ಸಾಸಿವೆ – ಅರ್‍ದ ಚಮಚ
- ಜೀರಿಗೆ – ಅರ್‍ದ ಚಮಚ
- ಪಲಾವ್ ಎಲೆ – 1
- ಚಕ್ಕೆ – ಕಾಲು ಇಂಚು
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಸ್ವಲ್ಪ
- ಅಕ್ಕಿ – 1 ಲೋಟ
ಮಾಡುವ ಬಗೆ:
ಮೊದಲಿಗೆ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿರಿ. ಆಮೇಲೆ ಅರ‍್ದ ತೆಂಗಿನ ಹೋಳಶ್ಟು ತುರಿಯಿರಿ. ನಂತರ ಈ ತುರಿಗೆ ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಬೆಳ್ಳುಳ್ಳಿ ಎಸಳು ಮತ್ತು ಚಕ್ಕೆ ಸೇರಿಸಿ ಒಂದು ಸುತ್ತು ಮಿಕ್ಸರ್ ನಲ್ಲಿ ತಿರುಗಿಸಿ ಇಟ್ಟುಕೊಳ್ಳಿರಿ. ಈರುಳ್ಳಿ, ಟೊಮೆಟೊ ಕತ್ತರಿಸಿ ಇಟ್ಟುಕೊಳ್ಳಿ. ಸಬ್ಬಸಿಗೆ ಸೊಪ್ಪು ತೊಳೆದು ಕತ್ತರಿಸಿ ಇಡಿರಿ. ಆಲೂಗಡ್ಡೆ ಸಿಪ್ಪೆ ತೆಗೆದು ತೆಳುವಾಗಿ ಕತ್ತರಿಸಿ. ಆಮೇಲೆ ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ದಪ್ಪ ಮೆಣಸಿನಕಾಯಿ ತೆಳುವಾಗಿ ಕತ್ತರಿಸಿ ಸ್ವಲ್ಪ ನೀರಿನಲ್ಲಿ ಒಂದು ಕುದಿ ಕುದಿಸಿ ಇಳಿಸಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಒಗ್ಗರಣೆ ಮಾಡಿರಿ. ಮೊದಲು ಕರಿ ಬೇವು, ಸಾಸಿವೆ, ಜೀರಿಗೆ, ಪಲಾವ್ ಎಲೆ ಹಾಕಿ. ನಂತರ ಕತ್ತರಿಸಿಟ್ಟ ಸಬ್ಬಸಿಗೆ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಈಗ ರುಬ್ಬಿಟ್ಟುಕೊಂಡ ಕೊಬ್ಬರಿ ಮಿಶ್ರಣ ಹಾಕಿ ನಂತರ ಕತ್ತರಿಸಿಟ್ಟ ಈರುಳ್ಳಿ, ಟೊಮೆಟೊ ಹಾಕಿ ಹುರಿಯಿರಿ ಮತ್ತು ಕುದಿಸಿಟ್ಟ ಆಲೂಗಡ್ಡೆ, ದಪ್ಪ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಉಪ್ಪು, ಅರಿಶಿಣ ಹಾಕಿರಿ. ಗರಮ್ ಮಸಾಲೆ ಪುಡಿ ಹಾಕಿ ಆಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ ಚೆನ್ನಾಗಿ ಬೆರೆಸಿ ಇಳಿಸಿ. ಈಗ ಅಗಲವಾದ ಪಾತ್ರೆಯಲ್ಲಿ ಅನ್ನ ಮತ್ತು ಒಗ್ಗರಣೆ ಕಲಸಿ ಬಿಸಿಮಾಡಿ ಇಳಿಸಿ. ಈಗ ಸಬ್ಬಸಿಗೆ ಸೊಪ್ಪಿನ ಅನ್ನ ಸವಿಯಲು ಸಿದ್ದವಾಗಿದ್ದು, ಇದರ ಮೇಲೆ ಸ್ವಲ್ಪ ಕೊಬ್ಬರಿ ತುರಿ ಹಾಕಿ ಬಡಿಸಿರಿ.
( ಚಿತ್ರಸೆಲೆ: ಬರಹಗಾರರು )


ಇತ್ತೀಚಿನ ಅನಿಸಿಕೆಗಳು