ಮಾಡಿ ನೋಡಿ ದಹಿ ಪೂರಿ
ಏನೇನು ಬೇಕು ?
- ಪೂರಿ – 7
- ಮೊಸರು – 6 ಟೀ ಚಮಚ (ಒಂದು ಚಿಟಿಕೆ ಸಕ್ಕರೆ ಹಾಕಿ ಸಿಹಿ ಮಾಡಿರುವುದು)
- ಬೇಯಿಸಿ ನುಣ್ಣಗೆ ಹಿಸುಕಿದ ಆಲೂಗಡ್ಡೆ – 1 ಕಪ್
- ಸಿಹಿ ಚಟ್ನಿ – 2 ಟೀ ಚಮಚ
- ರುಚಿಗೆ ತಕ್ಕಶ್ಟು ಉಪ್ಪು
- ಹಸಿರು ಚಟ್ನಿ – 2 ಟೀ ಚಮಚ
- ಸೇವ್/ಶೇವ್ – ಅಲಂಕಾರಕ್ಕಾಗಿ
- ತೆಳುವಾಗಿ ಹೆಚ್ಚಿದ ಈರುಳ್ಳಿ – 1
- ಅರ‍್ದ ಟೊಮೆಟೊ – ಸಣ್ಣಗೆ ಹೆಚ್ಚಿದ್ದು
- ಕೊತ್ತಂಬರಿ ಸೊಪ್ಪು – ಅಲಂಕಾರಕ್ಕಾಗಿ
ಮಾಡುವ ಬಗೆ:
ಮೊದಲಿಗೆ ಪೂರಿಗಳನ್ನು (7 ತುಣುಕುಗಳು) ಮದ್ಯದಲ್ಲಿ ಸರಿಯಾಗಿ ಒಡೆದು ಒಂದು ಪ್ಲೇಟ್ ಮೇಲೆ ಇಡಿ. ಇದಕ್ಕೆ ಸ್ವಲ್ಪ ಪ್ರಮಾಣದ ಬೇಯಿಸಿ ಹಿಸುಕಿದ ಆಲೂಗಡ್ಡೆಯನ್ನು ಹಾಕಿ. ಸ್ವಲ್ಪ ಸಿಹಿ ಚಟ್ನಿ ಮತ್ತು ಹಸಿರು ಚಟ್ನಿಯನ್ನು ಸೇರಿಸಿ. ನಂತರ ಎಲ್ಲಾ ಪೂರಿಗಳ ಮೇಲೆ ಎರಡು ಚಮಚ ಮೊಸರನ್ನು ಹಾಕಿ. ಅದರ ಮೇಲೆ ಒಂದು ಚಿಟಿಕೆ ಉಪ್ಪನ್ನು ಉದುರಿಸಿ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೊಗಳನ್ನು ಸೇರಿಸಿ. ಕೊನೆಯಲ್ಲಿ ಸೇವ್ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ದಹಿ ಪೂರಿ ಸವಿಯಲು ಸಿದ್ದ.
( ಚಿತ್ರಸೆಲೆ: ಬರಹಗಾರರು )


ಇತ್ತೀಚಿನ ಅನಿಸಿಕೆಗಳು