ಹನಿಗವನಗಳು

*** ತೈಲ ***
ಸುಂಕದ ಸರದಾರ
ಟ್ರಂಪ್ ಕಣ್ಣು ಕುಕ್ಕಿದ್ದು
ವೆನೆಜುವೆಲಾ ದ ತೈಲ
ಟ್ರಂಪ್ ಜೊತೆ ಸ್ನೇಹ ಇದ್ದಿದ್ದರೆ
ಮಡುರೋ ಅನ್ನುತಿದ್ದರು
ತೈಲ ಎಶ್ಟಾದರೂ ಒಯ್ಲಾ
*** ಚುಟುಕು ***
ದುಂಡಿ ರಾಜರು
ಬರೆದ ಚುಟುಕು
ತುಂಬಾ ಚೂಟಿ
ಚಳಿಗೆ ಮಂಕಾದವರ
ಚುರಕು ಗೊಳಿಸುವುದು
ಮಿದುಳ ಚೂಟಿ
*** ವಿಚಿತ್ರ ***
ಬರೆದು ಬರೆದು
ತಲೆಕೆಟ್ಟಾಗ ಹೆಂಡತಿ
ಮಾಡಿ ಕೊಡುವಳು ಕಾಪಿ
ತಲೆಕೆಟ್ಟು ಬರೆದಿದ್ದು
ವೈರಲ್ ಆದಾಗ
ಬೇರೆಯರು ಮಾಡುವರು ಕಾಪಿ
*** ಹೊಸ ವರ್ಶ ***
ಇಡೀ ಜಗತ್ತು
ಹೊಸ ವರ್ಶದ ಪ್ರಯುಕ್ತ
ಕುಶಿಯಲ್ಲಿ ತೇಲಿದೆ
ಕುಶಿಯು ಹೆಚ್ಚಾಗಿ
ಗೆಳೆಯರ ಜೊತೆಗೆ
ಎಣ್ಣೆಯಲ್ಲಿ ತೇಲಿದೆ.

ಇತ್ತೀಚಿನ ಅನಿಸಿಕೆಗಳು