ಗೋದಿ ಹಿಟ್ಟಿನ ಬರ್‍ಪಿ
– ಸವಿತಾ.

ಏನೇನು ಬೇಕು
- ಹಾಲು – 3 ಲೋಟ
- ಹಾಲಿನ ಪುಡಿ – 4 ಚಮಚ
- ತುಪ್ಪ – 6 ಚಮಚ
- ಗೋಧಿ ಹಿಟ್ಟು – 1 ಲೋಟ
- ಬಾದಾಮಿ – 2
- ಏಲಕ್ಕಿ – 2
- ಗೊಡಂಬಿ – 2
- ಬೆಲ್ಲ – ಮುಕ್ಕಾಲು [3/4] ಲೋಟ
ಮಾಡುವ ಬಗೆ
ಗೋದಿ ಹಿಟ್ಟಿಗೆ ಮೂರು ಚಮಚ ತುಪ್ಪ ಹಾಕಿ, ಹುರಿದು ತೆಗೆದಿಡಿ. ಹಾಲು ಕಾಯಿಸಿ, ಬೆಲ್ಲ, ಹಾಲಿನ ಪುಡಿ ಸೇರಿಸಿ. ಇದಕ್ಕೆ ಏಲಕ್ಕಿ, ಬಾದಾಮಿ ಪುಡಿ ಮಾಡಿ ಹಾಕಿ. ನಂತರ ಹುರಿದ ಗೋದಿ ಹಿಟ್ಟನ್ನು ಸೇರಿಸಿ, ಉಳಿದ ತುಪ್ಪ ಹಾಕಿ. ಬೆಲ್ಲ ಕರಗಿ ಎಲ್ಲಾ ಹೊಂದಿ ಮುದ್ದೆಯಾದ ಮೇಲೆ ಒಲೆ ಆರಿಸಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ನಂತರ ಗೋದಿ ಹಿಟ್ಟಿನ ಮಿಶ್ರಣ ಹಾಕಿ, ಸಮ ಮಾಡಿ. ಗೋಡಂಬಿ ಸ್ವಲ್ಪ ಕತ್ತರಿಸಿ ಮೇಲೆ ಹಾಕಿ ಸ್ವಲ್ಪ ಒತ್ತಿ, ಆರಲು ಬಿಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ಗೋದಿ ಹಿಟ್ಟಿನ ಬರ‍್ಪಿ ಈಗ ಸವಿಯಲು ಸಿದ್ದ.

ಇತ್ತೀಚಿನ ಅನಿಸಿಕೆಗಳು