ಪಾಲಕ್ ಸೊಪ್ಪಿನ ಕೋಳಿಯನ್ನು ಮಾಡುವ ಬಗೆ

ಪ್ರೇಮ ಯಶವಂತ.

%e0%b2%a4%e0%b2%bf%e0%b2%9f%e0%b3%8d%e0%b2%9f

ಬೇಕಾಗಿರುವ ಅಡಕಗಳು:

ಕೋಳಿ – 1 ಕೆ.ಜಿ
ಪಾಲಕ್ ಸೊಪ್ಪು – 3-4 ಕಟ್ಟು
ಚಕ್ಕೆ – 1 ಇಂಚು
ಲವಂಗ – 3-4
ಅರಿಸಿನ – 1/4 ಚಮಚ
ಶುಂಟಿ ಬೆಳ್ಳುಳ್ಳಿ ಗೊಜ್ಜು – 2 ಚಮಚ
ದೊಡ್ಡ ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
ಬೆಳ್ಳುಳ್ಳಿ – 2-3 ಎಸಳು (ಸಣ್ಣಗೆ ಹೆಚ್ಚಿದ್ದು)
ಸಣ್ಣ ಗೂದೆಹಣ್ಣು(Tomato) – 2 (ಸಣ್ಣಗೆ ಹೆಚ್ಚಿದ್ದು)
ಹಸಿ ಮೆಣಸಿನಕಾಯಿ – 2-3 (ಸಣ್ಣಗೆ ಹೆಚ್ಚಿದ್ದು)
ಎಣ್ಣೆ – 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಕಾರದ ಪುಡಿ – 2 ಚಮಚ ಇಲ್ಲವೇ ರುಚಿಗೆ ತಕ್ಕಶ್ಟು
ದನಿಯ ಪುಡಿ – 3/4 ಚಮಚ
ಜೀರಿಗೆ ಪುಡಿ – 1/2 ಚಮಚ
ಗರಂ ಮಸಾಲೆ ಪುಡಿ – 1/4 ಚಮಚ
ಒಣಗಿದ ಮೆಂತ್ಯೆ ಸೊಪ್ಪಿನ ಪುಡಿ – 1 ಚಮಚ

ಮಾಡುವ ಬಗೆ:

ಒಂದು ಪ್ರಾತ್ರೆಯಲ್ಲಿ ನೀರನ್ನು ಕಾಯಿಸಿ ಅದಕ್ಕೆ ಬಿಡಿಸಿದ ಸೊಪ್ಪನ್ನು ಹಾಕಿ 3-5 ನಿಮಿಶ ಬೇಯಿಸಿ. ನೀರನ್ನು ಬಸಿದು, ಸೊಪ್ಪನ್ನು ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ‍ಕಂದು ಬಣ್ಣ ಬ0ದ ಕೂಡಲೆ ಚಕ್ಕೆ, ಲವಂಗ, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕೆಂಪಗಾಗುವವರೆಗು ಬೇಯಿಸಿರಿ. ಇದಕ್ಕೆ ಶುಂಟಿ ಬೆಳ್ಳುಳ್ಳಿ ಗೊಜ್ಜನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿದ ಬಳಿಕ ತೊಳೆದ ಕೋಳಿಯನ್ನು ಸೇರಿಸಿ ಬೇಯಿಸಿರಿ. ಬೆಂದ ಕೋಳಿಗೆ ಹೆಚ್ಚಿದ ಗೂದೆಹಣ್ಣು ಹಾಕಿ 1-2 ನಿಮಿಶ ಬಾಡಿಸಿ. ಈಗ ರುಬ್ಬಿರುವ ಪಾಲಕ್ ಸೊಪ್ಪನ್ನು ಹಾಕಿ ಕಾರದ ಪುಡಿ, ಅರಸಿನ ಪುಡಿ, ಗರಮ್ ಮಸಾಲೆ ಪುಡಿ, ಜೀರಿಗೆ ಪುಡಿ, ದನಿಯ ಪುಡಿ, ಉಪ್ಪು, ಒಣಗಿದ ಮಂತ್ಯೆ ಸೊಪ್ಪಿನ ಪುಡಿ ಹಾಕಿ ಎಣ್ಣೆ ಮೇಲೆ ತೇಲುವವರೆಗು ಬೇಯಿಸಿಕೊಳ್ಳಿ.

ರುಚಿಯಾದ ಪಾಲಕ್ ಸೊಪ್ಪಿನ ಕೋಳಿಯನ್ನು ಚಪಾತಿ, ದೋಸೆ ಅತವ ಪೂರಿಯೊಂದಿಗೆ ಸವಿಯಬಹುದಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: