ಸೋರೆಕಾಯಿ ಗಜ್ಜರಿ ಹಲ್ವಾ

ಸವಿತಾ.

ಸೋರೆಕಾಯಿ ಗಜ್ಜರಿ ಹಲ್ವಾ, sorekayi gajjari halva

ಏನೇನು ಬೇಕು?

ತುರಿದ ಸೋರೆಕಾಯಿ —- 1 ಬಟ್ಟಲು
ತುರಿದ ಗಜ್ಜರಿ —- 1 ಬಟ್ಟಲು
ತುರಿದ ಹಸಿಕೊಬ್ಬರಿ —- 1 ಬಟ್ಟಲು
ಚಿರೋಟಿ ರವೆ —- 1 ಬಟ್ಟಲು
ಬೆಲ್ಲ —- 1-1/2 ಲೋಟ (ಒಂದೂವರೆ ಲೋಟ)
ಏಲಕ್ಕಿ —- 2
ತುಪ್ಪ —- 1/4 (ಕಾಲು ಬಟ್ಟಲು)

ಮಾಡುವ ಬಗೆ:

ಸೋರೆಕಾಯಿ ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಿ. ಗಜ್ಜರಿಯನ್ನು ಕೂಡಾ ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಬೇಕು. ತೆಂಗಿನ ತುರಿ ತುರಿದು ಇಟ್ಟುಕೊಳ್ಳಿ. ಬಾಣಲೆಗೆ 2 ಚಮಚ ತುಪ್ಪ ಹಾಕಿ ರವೆ ಹುರಿದು ತೆಗೆದಿಡಿ. ನಂತರ, 1 ಚಮಚ ತುಪ್ಪ ಹಾಕಿ, ಸೋರೆಕಾಯಿ ಹುರಿದು ತೆಗೆಯಿರಿ. ಕೊನೆಗೆ 1 ಚಮಚ ತುಪ್ಪ ಸೇರಿಸಿ, ತುರಿದ ಗಜ್ಜರಿ ಹಾಕಿ ಚೆನ್ನಾಗಿ ಹುರಿದು ತೆಗೆಯಿರಿ.

ಬೆಲ್ಲ ಮತ್ತು 4 ಚಮಚ ನೀರು ಹಾಕಿ ಬೆಲ್ಲ ಕರಗಿಸಿ ನಂತರ ಸಣ್ಣ ಉರಿಯಲ್ಲಿಟ್ಟು, ಸೋರೆಕಾಯಿ, ಗಜ್ಜರಿ, ಕೊಬ್ಬರಿ ತುರಿ ಹಾಕಿ ಸ್ವಲ್ಪ ತುಪ್ಪ ಹಾಕಿ ತಿರುಗಿಸಿ. ಹುರಿದ ರವೆ ಹಾಕಿ, ತಳ ಬಿಡುವವರೆಗೆ ತಿರುಗಿಸುತ್ತಾ ಇರಬೇಕು. ಎಲ್ಲ ಹೊಂದಿಕೊಂಡು ಸ್ವಲ್ಪ ಗಟ್ಟಿ ಆಗಬೇಕು ಮತ್ತು ತಳ ಬಿಟ್ಟು ಬರುವಾಗ ಒಲೆ ಆರಿಸಿ. ಏಲಕ್ಕಿ ಪುಡಿ ಮಾಡಿ ಹಾಕಿ.

ಒಂದು ತಟ್ಟೆಗೆ 1 ಚಮಚ ತುಪ್ಪ ಸವರಿ ಇಡಿ. ಇನ್ನೊಮ್ಮೆ ಚೆನ್ನಾಗಿ ಕಲಸಿ, ಮಾಡಿಟ್ಟ ಸಿಹಿಯನ್ನು ತಟ್ಟೆಗೆ ಸುರಿದು ಚೌಕಾಕಾರ ಅತವಾ ಬೇಕಾದ ಆಕಾರ ಕೊಟ್ಟು ಕತ್ತರಿಸಿ. ಈಗ ಸೋರೆಕಾಯಿ ಗಜ್ಜರಿ ಹಲ್ವಾ ತಯಾರಾಯಿತು. ಆರೋಗ್ಯಕರ ಹಲ್ವಾ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *