ಅಕ್ಕಿ-ಕಡಲೇ ಬೇಳೆ ಪಾಯಸ
– ಸವಿತಾ.
ಬೇಕಾಗುವ ಸಾಮಾನುಗಳು
ಅಕ್ಕಿ – 1 ಲೋಟ
ಕಡಲೇ ಬೇಳೆ – 1 ಲೋಟ
ಹಸಿ ಕೊಬ್ಬರಿ ತುರಿ – 1 ಲೋಟ
ಹಾಲು – 1 ಲೋಟ
ಬೆಲ್ಲ – 1 ಅತವಾ 1 & 1/2 ಲೋಟ
ತುಪ್ಪ – 3 ಚಮಚ
ಗೋಡಂಬಿ – 10
ಒಣ ದ್ರಾಕ್ಶಿ – 10
ಏಲಕ್ಕಿ – 4
ಗಸಗಸೆ – 2 ಚಮಚ
ಅರಿಶಿಣ ಪುಡಿ – ಸ್ವಲ್ಪ
ಮಾಡುವ ಬಗೆ
ಮೊದಲಿಗೆ ಅಕ್ಕಿ & ಕಡಲೇ ಬೇಳೆಯನ್ನು ಚೆನ್ನಾಗಿ ತೊಳೆದು, ಒಂದು ಗಂಟೆ ನೀರಲ್ಲಿ ನೆನೆಯಲು ಇಡಬೇಕು. ನಂತರ ಕೂಕ್ಕರ್ ನಲ್ಲಿ ನಾಲ್ಕು ಕೂಗು ಬರುವವರೆಗೆ ಕುದಿಸಿ ಇಳಿಸಿ. ಹಸಿ ಕೊಬ್ಬರಿ ತುರಿ, ಗಸಗಸೆ ಸೇರಿಸಿ ನುಣ್ಣ ಗೆ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ.
ಒಂದು ಪಾತ್ರೆ ಬಿಸಿ ಮಾಡಿ ಸಣ್ಣ ಉರಿಯಲ್ಲಿ, ತುಪ್ಪದಲ್ಲಿ ಗೋಡಂಬಿ, ಒಣ ದ್ರಾಕ್ಶಿ ಹುರಿದು ತೆಗೆಯಿರಿ. ಅದೇ ಪಾತ್ರೆಗೆ ಕುದಿಸಿದ ಅಕ್ಕಿ, ಕಡಲೇ ಬೇಳೆ ಹಾಕಿರಿ. ರುಬ್ಬಿದ ಕೊಬ್ಬರಿ ಮತ್ತು ಬೇಕಾದಶ್ಟು ನೀರು ಸೇರಿಸಿ, ಬೆಲ್ಲ ಹಾಕಿ. (ಬೆಲ್ಲ ನಿಮ್ಮ ರುಚಿಗೆ ಅನುಸಾರ ಹಾಕಿರಿ). ಸ್ವಲ್ಪ ತುಪ್ಪ, ಸ್ವಲ್ಪ ಅರಿಶಿಣ ಪುಡಿ ಮತ್ತು ಹಾಲು ಹಾಕಿ ಒಂದು ಕುದಿ ಕುದಿಸಿ ಇಳಿಸಿರಿ.
ಹುರಿದ ಗೋಡಂಬಿ, ಒಣ ದ್ರಾಕ್ಶಿ ಮತ್ತು ಪುಡಿ ಮಾಡಿದ ಏಲಕ್ಕಿ ಹಾಕಿ ಕಲಸಿ. ಹಬ್ಬದ ಸಿಹಿ ಅಡುಗೆ ಅಕ್ಕಿ ಕಡಲೇ ಬೇಳೆ ಪಾಯಸ ಸವಿಯಲು ತಯಾರಾಯಿತು.

ಇತ್ತೀಚಿನ ಅನಿಸಿಕೆಗಳು