ಬೀಟ್ರೂಟ್ ಗಜ್ಜರಿ ಹಲ್ವಾ
– ಸವಿತಾ.
ಏನೇನು ಬೇಕು ?
- ಬೀಟ್ರೂಟ್ – 1
- ಗಜ್ಜರಿ – 2
- ಹಸಿ ಕೊಬ್ಬರಿ – ಅರ್‍ದ ಹೋಳು
- ಬೆಲ್ಲ – ಮುಕ್ಕಾಲು ಅತವಾ ಒಂದು ಲೋಟ [ ರುಚಿಗೆ ತಕ್ಕಂತೆ ]
- ಏಲಕ್ಕಿ – 2
- ತುಪ್ಪ – 3 ಚಮಚ
- ಉಪ್ಪು – ಅರ್‍ದ ಚಮಚ
ಮಾಡುವ ಬಗೆ
ಮೊದಲಿಗೆ ಬೀಟ್ರೂಟ್ ಗಜ್ಜರಿ ತೊಳೆದು ಸಿಪ್ಪೆ ತೆಗೆಯಿರಿ. ಆಮೇಲೆ ಬೀಟ್ರೂಟ್, ಗಜ್ಜರಿ ಮತ್ತು ತೆಂಗಿನ ತುರಿ ತುರಿದು ಇಟ್ಟುಕೊಳ್ಳಿರಿ. ಈಗ ಒಂದು ಬಾಣಲೆಗೆ ತುಪ್ಪ ಹಾಕಿ, ತುರಿದ ಬೀಟ್ರೂಟ್, ಗಜ್ಜರಿ ಮತ್ತು ತೆಂಗಿನ ತುರಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಪುಡಿ ಮಾಡಿಕೊಂಡ ಬೆಲ್ಲವನ್ನು ಸೇರಿಸಿ, ಕೈಯಾಡಿಸುತ್ತಾ ಇರಬೇಕು. ಬೆಲ್ಲ ಕರಗಿ ಒಂದು ಕುದಿ ಕುದಿಯಬೇಕು. ಎಲ್ಲಾ ಹೊಂದಿಕೊಂಡು ಮುದ್ದೆಯಾಗಿ ಬರುವಾಗ, ಏಲಕ್ಕಿ, ಉಪ್ಪು ಸೇರಿಸಿ ಅರೆದು ಹಾಕಿ. ಈಗ ಸರಳವಾದ ಹಾಗೂ ಆರೋಗ್ಯಕರ ಬಿಸಿ ಬಿಸಿ ಬೀಟ್ರೂಟ್ ಗಜ್ಜರಿ ಹಲ್ವಾ ಸವಿಯಲು ಸಿದ್ದವಾಗಿದೆ.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು