ತಮಿಳುನಾಡಿನ ಹೆಸರುವಾಸಿ ಕಲಸಿದ ಮೊಟ್ಟೆ
ಏನೇನು ಬೇಕು
- ಮೊಟ್ಟೆ – 1
- ಈರುಳ್ಳಿ – 1
- ಮೆಣಸಿನಪುಡಿ – ಸ್ವಲ್ಪ
- ಚಿಕನ್ ಇಲ್ಲವೆ ಮಟನ್ ಗ್ರೇವಿ – ಸ್ವಲ್ಪ (ಬೇಕಿದ್ದರೆ)
ಮಾಡುವ ಬಗೆ
ತಮಿಳುನಾಡು ಶೈಲಿಯ ಮೊಟ್ಟೆ ಕಲಕ್ಕಿ (ಕಲಸಿದ ಮೊಟ್ಟೆ) ಮಾಡಲು ಒಂದು ಲೋಟ ಇಲ್ಲವೆ ಚಿಕ್ಕ ಕಪ್ ಗೆ ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ, ಇದಕ್ಕೆ ರುಚಿಗೆ ತಕ್ಕಶ್ಟು ಉಪ್ಪು ಹಾಗೂ ಸಣ್ಣದಾಗಿ ಕತ್ತರಿಸಿದ ಸ್ವಲ್ಪ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿ. ನಂತರ ಚಿಕನ್ ಇಲ್ಲವೆ ಮಟನ್ ಗ್ರೇವಿ ಹಾಕಿ ಕಲಸಿ, ಕಾದ ತವೆಗೆ ಸ್ವಲ್ಪ ಅಡುಗೆ ಎಣ್ಣೆ ಸವರಿ ಆಮ್ಲೇಟ್ ರೀತಿಯಲ್ಲಿ ಹರಡಿ. ಮೇಲೆ ಮೆಣಸಿನಪುಡಿಯನ್ನು ಉದುರಿಸಿ.
ಹೆಚ್ಚು ಹೊತ್ತು ಬಿಡದೆ (5 ರಿಂದ 8 ಸೆಕೆಂಡ್ ಸಾಕು) ಬೇಗನೆ ಒಂದು ಸಣ್ಣ ಸೌಟ್ ನಿಂದ ನಾಲ್ಕೂ ಮೂಲೆಯಿಂದಲೂ ಹರಡಿದ ಮೊಟ್ಟೆಯನ್ನು ನಡುವೆ ತಂದು, ಒಂದು ತಟ್ಟೆಗೆ ಹಾಕಿಕೊಂಡು ಸವಿಯಿರಿ. ಎಶ್ಟು ಬೇಗ ತೆಗೆಯುವಿರೋ ಅಶ್ಟು ರುಚಿಯಾಗಿರುತ್ತದೆ. ಹಾಪ್ ಬಾಯಿಲ್ ಇಶ್ಟ ಪಡುವವರಿಗೆ ಇದು ಹೆಚ್ಚು ಹಿಡಿಸಬಹುದು. ನಿಮಗೆ ಪ್ಲೇನ್ ಕಲಕ್ಕಿ ಬೇಕೆಂದಲ್ಲಿ , ಗ್ರೇವಿ ಹಾಕದೆ ಹಾಗೇಯೆ ಮಾಡಬಹುದು.
(ಚಿತ್ರಸೆಲೆ: instagram.com )
ಇತ್ತೀಚಿನ ಅನಿಸಿಕೆಗಳು