ಕವಿತೆ: ಮುಕುತಿಯ ಮುಡಿ
ಶಿಲೆಯ ಬೆಲೆ ಉಳಿಯ ಪೆಟ್ಟನು
ತಿನ್ನುವುದರಲ್ಲಡಗಿದೆ..
ಕಲೆಯ ಬೆಲೆ, ಅದ ಪೋಶಿಸುವವನ
ಮನದಲಿ ಅಡಗಿದೆ..
ಬದುಕಿನ ಬೆಲೆ,
ಬಾಳುವ ಪರಿಯಲಡಗಿದೆ..
ಒಲುಮೆಗೆ ಬೆಲೆ,
ತ್ಯಾಗದಲಿ ಅಡಗಿದೆ…
ಮಳೆಗೆ ಬೆಲೆ,
ಇಳೆಯೊಡಲ ದಾಹ ತಣಿಸುವುದರಲಿ ಅಡಗಿದೆ..
ಗೆಳೆತನದ ಬೆಲೆ,
ನಿಸ್ವಾರ್ತದ ಒಡನಾಟದಲಿ ಅಡಗಿದೆ..
ಅಂದಕೆ ಬೆಲೆ,
ನಡೆದುಕೊಳ್ಳುವ ಗುಣದಲಿ ಅಡಗಿದೆ
ಬಕುತಿಗೆ ಬೆಲೆ,
ಮುಕುತಿಯ ಮುಡಿ ಏರುವುದರಲಡಗಿದೆ..
( ಚಿತ್ರಸೆಲೆ: designer.microsoft.com )
ಇತ್ತೀಚಿನ ಅನಿಸಿಕೆಗಳು