ಕವಿತೆ: ನಮ್ಮ ಗಣಪ
ಚೌತಿಯಲ್ಲಿ ಬಂದ ನಮ್ಮ ಗಣಪ
ಚಿಣ್ಣರ ಚೆಲುವ ಬಾಲ ಗಣಪ
ಪಾರ್ವತಿ ತನಯ ಮುದ್ದು ಗಣಪ
ಶಂಕರನ ಕುವರನು ನಮ್ಮ ಗಣಪ
ಸೊಂಡಿಲನು ಆಡಿಸುವನು ಅತ್ತಿತ್ತ
ಹಾವನು ಬಿಗಿದುಕೊಂಡ ಡೊಳ್ಳು ಹೊಟ್ಟೆಯ ಸುತ್ತ
ಮೂಶಿಕನ ಮೇಲೆ ಸವಾರಿ ಮಾಡುತ್ತ
ದಾರಿದಾರಿಯಲ್ಲಿ ಹೊರಟನು ನಮ್ಮ ತುಂಟ ಗಣಪ
ಮನೆ ಮನೆಗೂ ಬರುವನು
ಅಮ್ಮ ಗೌರಿಯ ಜೊತೆ ಕೂರುವನು
ಹಣ್ಣು ಹಂಪಲು ಸವಿಯುವನು
ಮೋದಕ ಪ್ರಿಯ ಇವನು ನಮ್ಮ ಗಣಪ
ಮಕ್ಕಳ ಅಕ್ಕರೆಗೆ ತಲೆಬಾಗುವನು
ಬಕ್ತಿ ಸುದೆಗೆ ತನ್ಮಯನಾಗುವನು
ಚಂದ್ರನನ್ನು ನೋಡಿದವರಿಗೆ ಸಂಕಟ ನೀಡುವನು
ಬೇಡಿದವರ ಪಾಲಿಗೆ ವರಸಿದ್ದಿ ವಿನಾಯಕ ಇವನು
ಊರುಕೇರಿಯೆಲ್ಲಾ ಮೆರವಣಿಗೆ ಹೋಗುವನು
ಬಕ್ತರನ್ನೆಲ್ಲಾ ಹರಸಿ ಮರಳುವನು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು