ಕವಲು: ನಲ್ಬರಹ

ಮೋಡದ ಮೋಡಿ

– ಬರತ್ ಕುಮಾರ್. {ಪರ‍್ಸಿ ಬಿಶ್ ಶೆಲ್ಲಿ (ಪಿ.ಬಿ.ಶೆಲ್ಲಿ) ಇನಿತನಕ್ಕೆ ಮತ್ತು ನಲ್ಸಾಲುಗಳಿಗೆ ಹೆಸರಾದ ಇಂಗ್ಲಿಶ್ ನಲ್ಬರಹಗಾರ. ಶೆಲ್ಲಿಯವರ Masque of Anarchy ಅಂತೂ ಕಾಡದಿಕೆಯನ್ನು ಎತ್ತಿಹಿಡಿದ ನಲ್ಬರಹ. ಈ ಸಾಲುಗಳೇ ಮಹಾತ್ಮ ಗಾಂದಿಯವರ...

ಹಲತನವು ಹಿರಿದು

–ರತೀಶ ರತ್ನಾಕರ ಬಾಗಿಲಿಗೆ ಬಂದಿರುವ ಬೇಡುಗನೆ ಕೇಳು ನನಗಾಗಿ ನೀ ಏನ್ ಮಾಡುವೆ ಹೇಳು? ನಾಲೆಯ ನೀರಿಗೆ ನೆಲೆಯಾಗ ಬೇಕು ನಮ್ಮದೇ ನೆಲವನ್ನು ಉಳಿಸಿದರೆ ಸಾಕು| ಗಡಿಯನ್ನು ಬಿಡಿಯಾಗಿ ಮಾರದಿರು ನೀನು ನುಡಿಯನ್ನು...

ಪೊದೆಯೊಳಗಿನ ಗವುರಿ ಗಣೇಶ

–ಸಿ.ಪಿ.ನಾಗರಾಜ ಮಂಡ್ಯ ನಗರಕ್ಕೆ ನೀರು ಸರಬರಾಜು ಮಾಡುವ ದೊಡ್ಡ ವಾಟರ್ ಟ್ಯಾಂಕಿನ ಬಳಿಯಿರುವ ಗೆಳೆಯರೊಬ್ಬರ ಮನೆಗೆ ಹೋಗುತ್ತಿದ್ದಂತೆಯೇ ಅವರು “ಬನ್ನಿ …ಬನ್ನಿ …ಈ ಕಡೆ ಬನ್ನಿ “ ಎಂದು ಕರೆಯುತ್ತಾ … ತಮ್ಮ...

ಮರೆಯಲಾರೆ…

–ದೇವೆಂದ್ರ ಅಬ್ಬಿಗೇರಿ ಅಗಲಿಕೆಯ ಈ ಕ್ಶಣದಲಿ ನೆನಪುಗಳನು ಮೆಲಕು ಹಾಕಿ ಅಸಹನೀಯ ದೂರವನು ಮೀರಿಸುವ ಸಾಹಸದಲಿ ಇಂದಿನ ಕಹಿ ಸತ್ಯ ಹಿಂದಿನ ಸಿಹಿ ನೆನಪನ್ನು ಮೆಟ್ಟಿ ನಿಂತು ಅಟ್ಟಹಾಸದಿಂದ ನಗುತಿದೆ. ಕೊನೆಗೆ ಕಹಿಯೊಂದೆ...

ತಟ್ಟಿ ಎಬ್ಬಿಸಲು ಮೂರು ಚುಟುಕಗಳು

–ರತೀಶ ರತ್ನಾಕರ (1) ತಟ್ಟಿ ಎಬ್ಬಿಸು ನಿನ್ನ ನೀನು ತಟ್ಟಿ ಎಬ್ಬಿಸು ನಿನ್ನ ನೀನು ಕನ್ನಡಮ್ಮನ ಪುಟ್ಟ ಮಾತಿದೆ ಕೇಳಬೇಕಿದೆ ನೆಟ್ಟು ಕಿವಿಯನು ಕೆಟ್ಟ ಕೂಟವು ಅಟ್ಟವೇರಿದೆ ಮಟ್ಟ ಹಾಕಲು ನಿನ್ನನು| ಬಿಟ್ಟಿ...

ತಾಯ ರುಣವು ತೀರಲಿ

– ಶ್ವೇತ ಪಿ.ಟಿ. ಕಡೆದ ಕಲ್ಲು ಶಿಲ್ಪವಾಗಿ ಇತಿಹಾಸವ ಸಾರಿದೆ ದಾಸ ಶರಣ ಸಾಹಿತ್ಯದಿ ಜ್ನಾನ ಜ್ಯೋತಿ ಬೆಳಗಿದೆ ಕನ್ನಡ ನುಡಿ ಸಿರಿಯು ಮೆರೆದು ಬಾವ ಚಿಲುಮೆಯಾಗಿದೆ ಕನ್ನಡ ಗುಡಿ ಬಾವಯ್ಕ್ಯದಿ ತೆರೆದ ಬಾಗಿಲಾಗಿದೆ...

ಟಗರು ಮತ್ತು ಪ್ರೀತಿ

-ಸಿ.ಪಿ.ನಾಗರಾಜ   ನಾನು  ಏಳೆಂಟು  ವರುಶದ  ಹುಡುಗನಾಗಿದ್ದಾಗ ನಡೆದ ಪ್ರಸಂಗವಿದು. ನಮ್ಮೂರಿನಲ್ಲಿ ಒಂದು ದಿನ ಬೆಳಗ್ಗೆ ಇಬ್ಬರು ಆಳುಗಳೊಡನೆ ಹೊಲದ ಬಳಿಗೆ ಹೋದೆನು. ನಮ್ಮ ಸಂಗಡ ಮನೆಯಿಂದ  ಒಂದು ಟಗರು ಕೂಡ ಬಂದಿತ್ತು. ಆ ವರುಶ ಮಳೆಗಾಲ ಚೆನ್ನಾಗಿ ನಡೆದು ಹೊಲಮಾಳದಲ್ಲಿ ಎತ್ತ ನೋಡಿದರೆ ಅತ್ತ ರಾಗಿ ಪಯಿರುಗಳು  ತೆಂಡೆ ತೆಂಡೆಗಳಾಗಿ ಕವಲೊಡೆದು ಸೊಂಪಾಗಿ ಬೆಳೆದು ಹಚ್ಚಹಸಿರು ಕಣ್ಣಿಗೆ ರಾಚುತ್ತಿತ್ತು. ಸಾಲಾರಂಬದಲ್ಲಿ ಬೆಳೆದು ನಿಂತಿದ್ದ ಅವರೆ-ಹುಚ್ಚೆಳ್ಳು-ನವಣೆ-ಜೋಳ-ತೊಗರಿಯ ಗಿಡಗಳು ಬಿಳಿ ಹಳದಿ ಬಂಗಾರದ ಬಣ್ಣಬಣ್ಣದ ಹೂವುಗಳಿಂದ ತುಂಬಿ ಕಂಗೊಳಿಸುತ್ತಿದ್ದವು. ಹೊಲದೊಳಕ್ಕೆ  ಬರುತ್ತಿದ್ದಂತೆಯೇ ಆಳುಗಳು ಟಗರಿನ ಕತ್ತಿನಲ್ಲಿದ್ದ ಹುರಿಯನ್ನು ಬಿಚ್ಚಿ. ಅದು ತನಗೆ ಬೇಕೆಂದ ಕಡೆ ಮೇಯಲೆಂದು ಬಿಟ್ಟ ನಂತರ, ನನ್ನನ್ನು ಕುರಿತು “ನೀವು...

ನವೆಂಬರ್ ಕನ್ನಡ

–ಜೋಗನಹಳ್ಳಿ ಗುರುಮೂರ‍್ತಿ ಕನ್ನಡ ಕಾಲ್ಜಾರಿ ಬಿದ್ದಿತ್ತು ದಾರಿಯಲಿ ಅತ್ತಿತ್ತ ನೋಡಿದೆ, ಎಲ್ಲಾ ಕಾರ್‍ಯನಿಮಿತ್ತರು ಸಹಾಯಕ್ಕೆ ದೊರೆಯರು ಒಬ್ಬನೆ ಎತ್ತಿ ಒಳಗೆ ತಂದೆ ಕಟ್ಟಿಗೆಯ ಮಂಚ ಮುರಿದಿತ್ತು ಹಳೆಯ ಹಾಸಿಗೆ ಹರಿದಿತ್ತು ಹರಿದಿದ್ದ ಮರೆ...

ಬೆಳಗಿನ ಸೊಬಗು

–ಕುಮಾರ ದಾಸಪ್ಪ ಉದಯಿಸಿದನು ರವಿಯು ಮೂಡಣದಿ ಹಕ್ಕಿಗಳ ಕಲರವು ಮೊಳಗಿದೆ ದೂರದಿ| ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ ತ೦ಗಾಳಿಯು ತ೦ದಿಹದು ಮನಸಿಗೆ ನೂರೆ೦ಟು ನಲಿವುಗಳನು| ಮಕರಂದವ ಹೀರಲು ಹಾರಿಹಾರಿ ದುಂಬಿಯೊಂದು ಬೆಚ್ಚಿ...

ಪಯಿರು ಸತ್ತೋಗಿರ‍್ತವೆ

– ಸಿ. ಪಿ. ನಾಗರಾಜ. ಕಾಲೇಜಿನ ಕೆಲಸವನ್ನು ಮುಗಿಸಿಕೊಂಡು ಕಾಳಮುದ್ದನದೊಡ್ಡಿಯಿಂದ ಮಂಡ್ಯಕ್ಕೆ ಒಂದು ದಿನ ಸಾಯಂಕಾಲ ಬಸ್ಸಿನಲ್ಲಿ ಹಿಂತಿರುಗುತ್ತಿದ್ದಾಗ ನಡೆದ ಪ್ರಸಂಗವಿದು. ನನಗೆ ಚೆನ್ನಾಗಿ ಪರಿಚಿತರಾಗಿದ್ದ ಬೇಸಾಯಗಾರರೊಬ್ಬರು ನನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ, ನನ್ನನ್ನು...