ದುಡಿಮೆಯಿದ್ದೆಡೆ ಬದುಕು

– ರತೀಶ ರತ್ನಾಕರ.

ಹೊಟ್ಟೆಗೆ ಹಿಟ್ಟು ಬಿದ್ದೀತೆ
ಹೊಲವ ಬರಿಗಣ್ಣಿಂದ ಕಂಡೊಡನೆ?
ನೆಲವ ಉತ್ತು ಬಿತ್ತು ಪೊರೆದೊಡೆ
ಮೊಳೆತು ತೂಗುವುದೋ ತೆನೆ|

ಬಂಡೆಯೊಡೆದು ಬರಿಗಲ್ಲಾದೀತು
ಬಿಸಿಲು ಮಳೆಗೆ ಸವೆದು ಮಣ್ಣಾದೀತು
ಕಡುಗಲ್ಲ ಕಡೆದು ತೀಡಿದೊಡೆ
ಕಣ್ ಕೊರೆವ ಕಲ್ಕಲೆಯಾದೀತು|

ತಿಂಗಳ ಸಂಬಳ ಬಂದೀತೆ
ದುಡಿಯದೆ ಒಡೆಯನ ಹೊಗಳಲು?
ಮೈಮುರಿಯಬೇಕು ಬೆವರ್ ಹರಿಯಬೇಕು
ಗಳಿಕೆ ಬೆಳೆದು ಪಾಲೆಮೆಗೆ ಸಿಗಲು|

ಕನ್ನಡವೆಂದರೆ ಎನಗೆ ಎಲ್ಲಿಲ್ಲದೊಲವು
ಅನ್ನವಿಕ್ಕೀತೆ ನಮಗೀ ಒಣ ಹೆಮ್ಮೆ?
ಬದುಕು ಕಟ್ಟಿಟ್ಟಬುತ್ತಿ ಹಲತಲೆಮಾರಿಗೆ
ನುಡಿಕಡೆಗೆ ನಡೆದು ಮಾಡಿದೊಡೆ ದುಡಿಮೆ|

(ಚಿತ್ರ ಸೆಲೆ: article.wn)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks