ತುಂಬೆ ಹೂ
ಬೆಳ್ಮುಗಿಲ ನೆಂಟ ತಂಗದಿರ
ತುಂಬೆಯದು ಮಣ್ಮನೆಯ ಬೆಳ್ಳಿಹೂ
ತುಂಬುವನು ಕುಂದುವನು ತಿಂಗಳನು ಬಾನಲ್ಲಿ
ತುಂಬೆಯದು ನಗುತಿಹುದು ಹಸಿರಲ್ಲಿ ಮಯ್ಚೆಲ್ಲಿ
ತಿಂಗಳನ ಬೆಳಕಲ್ಲಿ ಜಗವೆಲ್ಲ ನಗುತಿಹುದು
ತುಂಬೆಗದು ಬೇಕಿಲ್ಲ ತನ್ನಿರವು ಗಿಡದಲ್ಲಿ
ತುಂಬು ಚಂದ್ರನ ಒಡಲು ಕಂಡು ಕೆರಳಿದೆ ಕಡಲು
ತುಂಬೆಯದು ತುಂಬುವುದು ಮಣ್ಣಮ್ಮನ ಮಡಿಲು
ತುಂಬೆಯ ಮಯ್ಮೇಲೆ ಸುಳಿದು ಸುಯ್ಯುವ ಗಾಳಿ
ತಂಪೆರೆಯೆ ಹೇಳುವರು ಅದು ಚಂದ್ರ ತಂಗಾಳಿ
ಚಂದಿರನು ಮೇಲಿದ್ದು ಕಾಣುವನು ನೆಲವೆಲ್ಲ
ತುಂಬೆಗದು ನಿಲುಕದು ಮಣ್ಣೊಳಿದೆ ಬೇರೆಲ್ಲ
ತುಂಬು ಜವ್ವನೆ ತುಂಬೆ ನಗುಮೊಗದ ಮೊಲ್ಲೆ
ತುಂಬಿಯನು ಬರಸೆಳೆದು ನಗಿಸಲೂ ಬಲ್ಲೆ
ನಿತ್ಯ ಕನ್ನಿಕೆ ತುಂಬೆ ನಗುವೆನ್ನ ಮನತುಂಬೆ
ತುಂಬಿಯೂ ತುಳುಕದಿಹ ಬಿಡಿಹೂವ ನಾ ಕಾಂಬೆ
(ಚಿತ್ರ: http://dgmalliphotos.blogspot.com)
BahaLa cennaagide. impeseva tampereva kattore
hiige bareyiri!
tumba cennaagide marijoseph
ತುಂಬಾ ಚೆನ್ನಾಗಿದೆ.