ಕಾಡುವುದು ನಿನ್ನ ನೆನಪು
– ಬರತ್ ಕುಮಾರ್.
ನಿನ್ನ ನೆನಪು
ಕಾಡುವುದು ಕಡಲಾಗಿ
ಮೂಡುವುದು ಒಡಲಲ್ಲಿ
ಅಲೆಗಳಾಗಿ ನಿನ್ನ ನೆನಪು
ತೋಡಿಕೊಳಲೆನ್ನ ಬೇನೆ
ಆಡಿಕೊಳ್ವರು ಜನರು
ಕೂಡುವುದಕೆ ನೀನಿಲ್ಲದೆ
ಕಾಡುವುದು ನಿನ್ನ ನೆನಪು
ಬೆರಳ ತುದಿಗಳೆನ್ನ
ನಿನ್ನನೆ ನೆನೆಯುತಿಹವು
ನಿನ್ನ ಸೋಕಲು ಕಾಯುತಿಹವು
ಕಾಡುವುದು ನಿನ್ನ ನೆನಪು
ಎದೆಯ ಬಾಗಿಲಿನಲ್ಲಿ
ಒಣತೋರಣವಿನ್ನು ಬಾಡಿ
ತಿಣುಕಾಡಿದೆ ಹಸಿರೊಲ್ಮೆಗೆ
ಕಾಡುವುದು ನಿನ್ನ ನೆನಪು
ಕೊಂಡೊಯ್ದೆ ನೀ ಎನ್ನ
ಬಾಳ ತಿರುಳುಗಳನ್ನ
ಮರುಳನಾಗಿಸಿ ನಿನ್ನೊನಪಿಗೆ
ಕಾಡುವುದು ನಿನ್ನ ನೆನಪು
ತಿರುವುಗಳೇ ಬಾಳೆಲ್ಲ
ಕುರುಹಗಳಿಲ್ಲ ನೆಮ್ಮದಿಯ
ವಿರಹದ ಬೇಗೆಯಲಿ
ಕಾಡುವುದು ನಿನ್ನ ನೆನಪು
(ಚಿತ್ರ: www.nesaftp.it)
ಚೆನ್ನಾಗಿದೆ…ಚೆನ್ನಾಗಿದೆ… ಆದರೆ, ನಿಮಗೆ ಕಾಡುತ್ತಿರುವುದು ಯಾರ ನೆನಪು ಮಾರಾಯ್ರೆ? 😉
ಯಾರ ನೆನಪು ಅಂತ ಹೇಳಿದರೆ ಅಶ್ಟು ಚೆನ್ನಾಗಿರುವುದಿಲ್ಲ. 🙂