ಸೆರೆ
ವಾಡಿಕೆಯಂತೆ,
ಮೇಲ್ಮೆಯಂತೆ ಹಿರಿಮೆಯಂತೆ.
ಬಾಯ್ಗೆ
ಬರ್‍ದಿಲ ಬಾನಹಾಲಂತೆ.
ಹವ್ದೇ?
ತೊಟ್ಟು ಬಿಟ್ಟುಕೊಂಡವಗೆ ತಿಳಿಯಿತು,
ಅದು ಅಮರ್‍ದಲ್ಲ,
ಬಾನಾಚೆ ಇರುವಂತೆ ಕಾಂಬರ,
“ಅಮರ್‍ದುಂಡ”ರ ಎಂಜಲ ಎರಚಲು.
ಅಂದು ಇಲ್ಲವೆಂದು ಎಂಜಲುಂಡೆ,
ಆದರೆ ಇಂದು ಉಳ್ಳವನದೂ
ಅದೇ ಎಂಜಲ ಅವ್ತಣ!
ಹಳಸುಗೂಳಾಗಿದೆ,
ಕೊಳೆತು ನಂಜಾಗಿದೆ.
ಕಣ್ಣು ಮುಚ್ಚಿದ್ದರೇನು
ನಾರುವುದು ತಿಳಿಯದೇ?
(ಚಿತ್ರ: http://www.phomix.com)
– ಸಂದೀಪ್ ಕಂಬಿ.
ಸಕತ್ !!!!!!!!!!!!!!!
ಸೊಗಸಾಗಿದೆ! 🙂
ವಿವೇಕ್, ಶಶಿಕುಮಾರ್, ನಿಮ್ಮ ಮೆಚ್ಚುಗೆಗಳಿಗೆ ನನ್ನಿ!