ಅಡುಗೆಯಲ್ಲಿ ಮಾವಿನಕಾಯಿಯ ಬಳಕೆ

chitraanna

ತಂಬುಳಿ

 • ಬೇಕಾಗುವ ಪದಾರ‍್ತ (ಸಾಮಗ್ರಿಗಳು):- ಒಂದು ಮಾವಿನಕಾಯಿ, ಹುಳಿಗೆ ತಕ್ಕಶ್ಟು ನೀರು, ಎರಡು ಚಮಚ ಎಣ್ಣೆ, ಒಣಮೆಣಸಿನಕಾಯಿ ಒಂದು, ಚಿಟಿಕೆ ಇಂಗು, ಕರಿಬೇವು, ರುಚಿಗೆ ತಕ್ಕಶ್ಟು ಉಪ್ಪು , ಚಿಟಿಕೆ ಜೀರಿಗೆ.
 • ಮಾಡುವ ಬಗೆ:- ಮಾವಿನಕಾಯಿಯ ಸಿಪ್ಪೆಯನ್ನು ತೆಗೆದು ಅದನ್ನು ತುಂಡುಗಳನ್ನಾಗಿ ಮಾಡಿ. ಒಗ್ಗರಣೆ ಸವ್ಟನ್ನು ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಚಮಚ ಎಣ್ಣೆ, ಹಸಿಮೆಣಸಿನಕಾಯಿ ಒಂದು, ಚಿಟಿಕೆ ಇಂಗು, ಮಾವಿನಕಾಯಿಯ ತುಂಡುಗಳನ್ನು ಹಾಕಿ ಬಾಡಿಸಿ. ಇದರ ಜೊತೆಗೆ ಒಂದು ಹೋಳು ಕಾಯಿಯನ್ನು ಹಾಕಿ. ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ, ಪಾತ್ರೆಗೆ ಹಾಕಿ. ನೀರನ್ನು ಸೇರಿಸಿ ರುಚಿಗೆ ತಕ್ಕಸ್ಟು ಉಪ್ಪು ಹಾಕಿ. ಒಗ್ಗರಣೆ  ಸವ್ಟಿಗೆ ಒಂದು ಚಮಚ ಎಣ್ಣೆ, ಚಿಟಿಕೆ ಸಾಸಿವೆ, ಇಂಗು, ಜೀರಿಗೆ, ಒಂದು ಒಣಮೆಣಸಿನಕಾಯಿ, ಕರಿಬೇವು  ಹಾಕಿ ಒಗ್ಗರಣೆ ಮಾಡಿ. ಇದನ್ನು ಅನ್ನದೊಂದಿಗೆ ಸವಿಯಿರಿ ಅತವಾ ಕುಡಿಯಿರಿ.

ಅಪ್ಪೆ ಹುಳಿ

 • ಬೇಕಾಗುವ ಸಾಮಗ್ರಿಗಳು:- ಬೇಯಿಸಿದ ಮಾವಿನಕಾಯಿ, ಎರಡು ಚಮಚ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಒಂದು, ಹಸಿಮೆಣಸಿನಕಾಯಿ ಒಂದು, ನೀರು, ಸಕ್ಕರೆ, ಉಪ್ಪು, ಕರಿಬೇವು.
 • ಮಾಡುವ ಬಗೆ:- ಮಾವಿನಕಾಯಿಯನ್ನು ಬೇಯಿಸಿ ರಸವನ್ನು ತೆಗೆದು  ಹುಳಿಗೆ ತಕ್ಕಶ್ಟು ನೀರನ್ನು, ರುಚಿಗೆ ತಕ್ಕಸ್ಟು ಉಪ್ಪನ್ನು ಬೆರೆಸಿ ಅದಕ್ಕೆ ಒಂದು ಚಮಚ ಸಕ್ಕರೆ ಹಾಕಿ, ಒಗ್ಗರಣೆ  ಸವ್ಟಿಗೆ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕರಿಬೇವು, ಚಿಟಿಕೆ ಇಂಗು ಹಾಕಿ ಒಗ್ಗರಣೆ ಮಾಡಿ. ಅನ್ನದೊಂದಿಗೆ ಸವಿಯಿರಿ ಅತವಾ ಕುಡಿಯಿರಿ.

ಚಟ್ನಿ

 • ಬೇಕಾಗುವ ಸಾಮಗ್ರಿಗಳು:- ಒಂದು ಮಾವಿನಕಾಯಿ, ಕೊಬ್ಬರಿ ತುರಿ, ಉದ್ದಿನಬೇಳೆ, ಎಳ್ಳು, ಇಂಗು, ಸಾಸಿವೆ, ಕರಿಬೇವು, ನೀರು, ಉಪ್ಪು.
 • ಮಾಡುವ ಬಗೆ:- ಒಂದು ಮಾವಿನಕಾಯಿಯ ಸಿಪ್ಪೆ ತೆಗೆದು ಅದನ್ನು ತುಂಡುಗಳನ್ನಾಗಿ ಮಾಡಿ, ಕೊಬ್ಬರಿತುರಿಯನ್ನು ಮಾಡಿಕೊಳ್ಳಿ. ಒಗ್ಗರಣೆ ಸವ್ಟಿನಲ್ಲಿ ಎಣ್ಣೆ, ಇಂಗು, ಹಸಿಮೆಣಸಿನಕಾಯಿ, ಉದ್ದಿನಬೇಳೆ, ಎಳ್ಳು ಹಾಕಿ ಹುರಿಯಿರಿ. ಮಾವಿನಕಾಯಿ ತುಂಡು, ಕೊಬ್ಬರಿ ತುರಿ, ಹುರಿದ ಪದಾರ‍್ತಗಳನ್ನು ಎಲ್ಲಾ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಹಾಕಿ ಒಗ್ಗರಣೆ ಸವ್ಟಿನಲ್ಲಿ ಎಣ್ಣೆ, ಸಾಸಿವೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ನೀಡಿ. ಇದನ್ನು ಅನ್ನದೊಂದಿಗೆ ಸವಿಯಿರಿ ಅತವಾ ದೋಸೆಗೆ ಅತವಾ ಚಪಾತಿಗೆ ನೆಂಜಿಕೊಳ್ಳಲು ನೀಡಿ.

ಉಪ್ಪಿನಕಾಯಿ

 • ಬೇಕಾಗುವ ಸಾಮಗ್ರಿಗಳು:- ಮಾವಿನಕಾಯಿ, ಒಣಮೆಣಸಿನಕಾಯಿ, ದನಿಯ, ಜೀರಿಗೆ, ಮೆಂತ್ಯ, ಇಂಗು, ಕರಿಬೇವು, ಎರಡು ಚಮಚ ಎಣ್ಣೆ ಮತ್ತು ಸಾಸಿವೆ
 • ಮಾಡುವ ಬಗೆ:- ಮಾವಿನಕಾಯಿಯನ್ನು ಹೆಚ್ಚಿ ಉಪ್ಪಿನಲ್ಲಿ ಹಾಕಿಟ್ಟುಕೊಳ್ಳಿ. ಎರಡು ದಿನದ ನಂತರ ಉಪ್ಪಿನಕಾಯಿಯ ಮಸಾಲೆ (ಒಣಮೆಣಸಿನಕಾಯಿ, ದನಿಯ, ಜೀರಿಗೆ, ಮೆಂತ್ಯ, ಇಂಗು, ಕರಿಬೇವು,  ಎರಡು ಚಮಚ ಎಣ್ಣೆ ಹಾಕಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟ) ಯನ್ನು ಉಪ್ಪಿನ ನೀರಿನಲ್ಲಿ ಕಲಸಿ. ಎಣ್ಣೆಗೆ ಸಾಸಿವೆ ಇಂಗು,ಮೆಂತ್ಯ ಹಾಕಿ ಒಗ್ಗರಣೆ ಮಾಡಿ.

ಮಾವಿನಕಾಯಿಯ ಚಿತ್ರಾನ್ನ

 • ಬೇಕಾಗುವ ಸಾಮಗ್ರಿಗಳು:- ಮಾವಿನಕಾಯಿ, ಹಸಿಮೆಣಸಿನಕಾಯಿ, ಕೊಬ್ಬರಿತುರಿ, ಇಂಗು, ಕೊತ್ತಂಬರಿ ಸೊಪ್ಪು, ಸಾಸಿವೆ,ಕರಿಬೇವು.
 • ಮಾಡುವ ಬಗೆ:- ಮಾವಿನಕಾಯಿಯನ್ನು ತುರಿಯಬೆಕು. ಒಗ್ಗರಣೆ ಸವ್ಟಿನಲ್ಲಿ ಎಣ್ಣೆ, ಇಂಗು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಮಾವಿನಕಾಯಿಯ ತುರಿಯನ್ನು ಹಾಕಿ ಬಾಡಿಸಿ. ಕೊಬ್ಬರಿತುರಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಒಗ್ಗರಣೆ ಸವ್ಟಿನಲ್ಲಿ ಎಣ್ಣೆ, ಸಾಸಿವೆ, ಕಡಲೆಬೀಜ (ಶೇಂಗಾಬೀಜ), ಇಂಗು, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು, ಎರಡು ಒಣಮೆಣಸಿನಕಾಯಿ, ರುಬ್ಬಿದ ಕಲಕವನ್ನು, ಜೊತೆಗೆ ಮಾವಿನಕಾಯಿಯ ತುರಿಯನ್ನು ಹಾಕಿ ಬಾಡಿಸಿ ರುಚಿಗೆ ತಕ್ಕಸ್ಟು ಉಪ್ಪನ್ನು ಹಾಕಿ ಅನ್ನದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿ. ಸವಿಯಲು ನೀಡಿ.

ಕಲ್ಪನಾ ಹೆಗಡೆ 

(ಚಿತ್ರ: http://mammuskitchen.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. ಬರಹ ತುಂಬಾ ಚೆನ್ನಾಗಿ ಇದೆ. ಅದರಲ್ಲೂ ಮಾವಿನಕಾಯಿ ಚಿತ್ರಾನ್ನ ಅಂದರೆ ನನಗೆ ತುಂಬಾ ಇಶ್ಟ. 🙂

 2. Rashmi Hegde says:

  tumba chennagidde… keep it up

 3. ಹಣ್ಣುಗಳ ರಾಜ ಮಾವಿನಲ್ಲಿ ಏನೇ ಮಾಡಿದರೂ ಸೊಗಸೇ. ಚೆನ್ನಾಗಿದೆ, ಚೆನ್ನಾಗಿದೆ. ಇದು ಮಾವಿನ ಕಾಲವಾಗಿರುವುದರಿಂದ ನಾನೂ ಒಂದು ಕೈ ನೋಡೇಬಿಡುತ್ತೇನೆ, ಕಲ್ಪನಾರವರೇ. ನಿಮಗೆ ನನ್ನಿಯೋ ನನ್ನಿ! 🙂

ಅನಿಸಿಕೆ ಬರೆಯಿರಿ: