ಪರಿಸ್ತಿತಿ ಕಯ್ಮೀರಿದಾಗ…

healthy-living-stress

ಕೆಲವೊಮ್ಮೆ ನಾವು ಬಾವಿಸಿದ ಹಾಗೆ  ನಡೆಯದಾಗ ನಮ್ಮ ಪ್ರತಿಕ್ರಿಯೆ ರುಣಾತ್ಮಕವೇ ಆಗಿರುವುದು ಸಹಜ. ನಮ್ಮ ಮನೋಬಾವ,  ಆಲೋಚನೆಗಳೆಲ್ಲ ರುಣಾತ್ಮಕವಾಗಿಯೇ ಇರುತ್ತದೆ. ಆಗ ಏಕೆ ಹೀಗಾಯಿತು? ಅತವಾ ಯಾವಾಗಲೂ  ನನ್ನೊಂದಿಗೇ ಏಕೆ ಹೀಗೆ ಆಗುತ್ತದೆ ನನಗೇ ಏಕೆ ಎಂಬ ಪ್ರಶ್ನೆ ಏಳುತ್ತದೆ.  ಪ್ರತಿ ಕ್ಶಣ, ಪ್ರತಿಯೊಂದು ನಿರ್‍ದಾರಗಳು ಮತ್ತು ನಮ್ಮ ಆಲೋಚನೆಗಳು ಇದಕ್ಕೆ ಕಾರಣ ಎಂದು ಬಾವಿಸಿ ಮುಂದಿನ ನಿರ್‍ದಾರಗಳನ್ನು ಮಾಡುತ್ತೇವೆ.. ನನಗೇ ಏಕೆ ಹೀಗೆ ಎಂದು ಪ್ರಶ್ನಿಸುವ ಬದಲು ಒಮ್ಮೆ ಹಿಂದಿರುಗಿ ಪುನರವಲೋಕನಮಾಡಿದಾಗ, ಪ್ರಶ್ನೆಗಳ ಮೂಲಕ್ಕೆ ಇಳಿದಾಗ ನಮಗೇ ಪರಿಹಾರವೂ ಗೋಚರಿಸುತ್ತದೆ.

ಬಹಳಶ್ಟು ಸಮಯ ನಮ್ಮ ಪ್ರಶ್ನೆಗಳಲ್ಲೇ ಉತ್ತರವೂ ಅಡಗಿರುತ್ತದೆ. ಯಾವಾಗ ನೀವು ಸಮಸ್ಯೆಯಲ್ಲಿ ಸಿಲುಕುತ್ತೀರೋ ಆಗ ಅದನ್ನು ಹಿಡಿತದಲ್ಲಿ ತೆಗೆದುಕೊಳ್ಳಲು ಆಲೋಚಿಸಿ, ಆ ಸಮಯದಲ್ಲಿ ಸಹಜವಾಗಿಯೇ ಅಂತಹ ಪರಿಸ್ತಿತಿಗಳಲ್ಲಿ ನಾವು ಹೀಗೇಕೆ ಯಾರಿಂದ ? ಹಾಗೂ ಹೇಗೆ ಎನ್ನುವ ಕೆಲವೊಂದು ರುಣಾತ್ಮಕ ಚಿಂತನೆಗಳಲ್ಲಿ ಮುಳುಗುತ್ತೇವೆ. ಅಂತಹ ಆಲೋಚನೆಗಳು ನಮ್ಮನ್ನು ದಾರಿತಪ್ಪಿಸಿ, ಪರಿಸ್ತಿತಿ ಇನ್ನೂ ಹದಗೆಡುವಂತೆ ಮಾಡುತ್ತವೆ.   ಗ್ರೆಗ್ ಹಿಕ್ಸ್  “ ನಾವು ಮೊದಲು ಸಮಸ್ಯೆ ಮತ್ತು ಅದರ ಪರಿಸ್ತಿತಿಯನ್ನು ಅರ್‍ತಮಾಡಿಕೊಳ್ಳಬೇಕು. ಅದಕ್ಕಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂದು ಹೇಳಿದ್ದಾರೆ. ಆತ್ಮಾವಲೋಕನ ಮಾಡಿಕೊಳ್ಳಲು ಈ ಕೆಳಗಿನಂತೆ ಪ್ರಶ್ನಿಸಿಕೊಳ್ಳಬೇಕು.

  1. ನಾನು ಈ ಸಮಸ್ಯೆ ಏಕೆ ಎದುರಿಸುತ್ತಿದ್ದೇನೆ? . ಇದು ನನ್ನಬಗ್ಗೆ ಏನು ಹೇಳುತ್ತಿದೆ? ನನ್ನ ವ್ರುತ್ತಿ, ಅಬ್ಯಾಸಗಳು , ವ್ಯಕ್ತಿತ್ವ ಮತ್ತು ನನ್ನ ಸಂಬಂದಗಳ ಬಗ್ಗೆ ಏನು ಹೇಳುತ್ತಿದೆ?
  2. ಈ ಪರಿಸ್ತಿತಿಯಿಂದ  ನಾನು ಏನನ್ನು ಕಲಿಯಬಲ್ಲೆ? ಕಲಿಯುವುದಾದರೂ ಏನು?
  3. ಈ ಪರಿಸ್ತಿತಿಯನ್ನು ನನಗೆ ಅನುಕೂಲವಾಗುವ ಹಾಗೆ ಮಾಡಿಕೊಳ್ಳುವುದು ಹೇಗೆ? ಮತ್ತೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಮೊದಲು ಅದನ್ನು ಅರ್‍ತಮಾಡಿಕೊಳ್ಳಬೇಕು ಇಲ್ಲದಿದ್ದರೆ ನಿರ್‍ದಾರಗಳು ಅಚಲವಾಗಿರುವುದಿಲ್ಲ.  ಅಂದರೆ ಆತ್ಮಾವಲೋಕನ ಮಾಡಿಕೊಂಡಾಗ,  ಸಮಸ್ಯೆಯ ತಳಹದಿಯನ್ನು ಹೊಕ್ಕು ನೋಡಿದಾಗ  ಅದರಿಂದ ನಮಗೆ ಹೊಸ ಮಾಹಿತಿಗಳು , ಹೊಸ ಆಲೋಚನೆಗಳು ಹಾಗೂ  ಅವಕಾಶಗಳು ಗೋಚರಿಸುತ್ತವೆ.

ಜಾನ್ ಮಿಲ್ಲರ್  ಎಂಬುವವರು ಪ್ರತಿ ಸಮಸ್ಯೆಯಲ್ಲಿ ಮುಳುಗಿರುವಾಗ ಆಲೋಚನೆ ಮಾಡುವಾಗ ಸರಿಯಾದ ಪ್ರಶ್ನಾ ಶಯ್ಲಿ ನಾನು, ನನ್ನಿಂದ ಎಂಬುದನ್ನು ಒಳಗೊಂಡಿರಬೇಕು. ಎಂದು ಹೇಳುತ್ತಾರೆ. ಅವರು , ಅದು , ಅವರಿಂದ ಎಂದಲ್ಲ. ನಾನು, ನನಗೆ ಎನ್ನುವ ಪ್ರಶ್ನೆಗಳು ನಮ್ಮ ಪರಿಹಾರ ಕಾರ್‍ಯಕ್ಕೆ ಅನುಕೂಲಕರವಾಗಿರುತ್ತವೆ.ನಾನು, ನನಗೆ, ನನ್ನಿಂದ ಎಂಬ ಪ್ರಶ್ನೆಗಳು ಕೇವಲ ನಮ್ಮ ಬಗ್ಗೆಯೇ ಆಲೋಚಿಸುವಂತೆ ಮಾಡುತ್ತವೆ. ಏಕೆಂದರೆ  ನಾವು ಇತರರನ್ನು ಬದಲಿಸಲು ಸಾದ್ಯವಿಲ್ಲ. ಹಾಗೆಯೇ ನಾವು ಪರಿಸ್ತಿತಿಯನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸಾದ್ಯವಿಲ್ಲ. ಆದರೆ ನಮ್ಮ ಆಲೋಚನೆ ಹಾಗೂ ಪ್ರತಿಕ್ರಿಯೆಯ ಮೇಲೆ ನಿಯಂತ್ರಣ ಹೊಂದಬಹುದು. ಪ್ರಶ್ನೆಗಳನ್ನು ಹಾಕಿಕೊಳ್ಳುವುದರಿಂದ ನಮ್ಮ ಪ್ರಯತ್ನ,ನಮ್ಮ ಶ್ರಮ ಒಂದೆಡೆಗೆ ಕೇಂದ್ರೀಕ್ರುತಗೊಳ್ಳುತ್ತದೆ. ಇದರಿಂದ ಪ್ರಮುಕವಾದ, ಪ್ರಬಾವ ಬೀರುವಂತ ಕಾರ್‍ಯಗಳನ್ನು ಮಾಡಬಹುದು.

ಪರಿಸ್ತಿತಿ ಕಯ್ಮೀರಿದಾಗ ನಾವು ಶಾಂತವಾಗಿಯೋ, ಯತಾ ಸ್ತಿತಿ ಸ್ವೀಕರಿಸುವುದೋ, ಕಾಳಜಿ ವ್ಯಕ್ತಪಡಿಸುವುದೋ, ಕುಸಿಯುವುದೊ ಮೊದಲಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಇದೆಲ್ಲ ಒಂದು ಕ್ಶಣದಲ್ಲಿ  ಆಗಿಹೋಗುವಂತಹುದು. ನಮ್ಮ ಪ್ರತಿಕ್ರಿಯೆಯಿಂದ ಪರಿಸ್ತಿತಿ ಉತ್ತಮಗೊಳ್ಳಬಹುದು ಇಲ್ಲವೇ , ಹಾಳಾಗಬಹುದು. ಇದು ನಮ್ಮ ಬದ್ದತೆ, ಪರಿಹಾರ, ಆವಲಂಬನೆ, ಹೊಂದಾಣಿಕೆ, ಸ್ವಬಾವ ಮೊದಲಾದವುಗಳು ಕೂಡ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಒಳಗೊಳ್ಳುತ್ತವೆ. ಅಲ್ಲದೆ

  1. ನಾವು ಪ್ರತಿಕ್ರಿಯಿಸುವ ರೀತಿ ನಮ್ಮ ಬಗ್ಗೆ ಇತರರ ಮೇಲೆ ಯಾವ ಪ್ರಬಾವ ಬೀರಿದೆ?ಹೇಗೆ ಸ್ವೀಕರಿಸುತ್ತಾರೆ?
  2. ನಾನು ಆ ಸಂದರ್‍ಬಗಳಲ್ಲಿ ಹೇಗೆ ಪ್ರತಿಕ್ರಿಯಿಸಿದೆ?
  3. ನಾನು ಪರಿಸ್ತಿತಿಯನ್ನು ಸರಿಯಾಗಿ ಅವಲೋಕಿಸಿದ್ದೇನೆಯೇ? ಇತರರು ನನ್ನ ಪ್ರತಿಕ್ರಿಯೆಗಳನ್ನು ಯಾವರೀತಿ ಸ್ವೀಕರಿಸಿದರು?

ನಮ್ಮ ಜೀವನದ ಪ್ರತಿಕ್ಶಣವೂ ಕಲಿಕೆ ಹಾಗೂ ಪಕ್ವತೆಯ ಕಡೆಗೆ ಸಾಗುತ್ತಿರುತ್ತದೆ. ದನಾತ್ಮಕತೆ ನಮ್ಮ ಸಂತೋಶಕ್ಕೆ ಕಾರಣವಾಗುತ್ತದೆ. ಪರಿಹಾರವನ್ನು ನಮ್ಮೊಳಗೇ ಹುಡುಕಿಕೊಳ್ಳಬೇಕು. ಬೇರೆಯವರಲಲ್ಲ.  ಆಗ ಪರಿಹಾರ ಬೇಗ ಮತ್ತು ಸರಿಯಾಗಿ ಆಗಬಲ್ಲುದು. ಪರಿಸ್ತಿತಿ ಕಯ್ಕೊಟ್ಟಾಗ ಅದರಿಂದ ಪಾಟ ಕಲಿಯುವಂತಿರಬೇಕು.

ಬಾರದು ಬಪ್ಪದು ಬಪ್ಪುದು ತಪ್ಪದು ( ಬರುವಂತಹುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ) ಎಂದು ಮರ್‍ಪಿ ಹೇಳುತ್ತಾನೆ.

ಎಲ್ಲರಕನ್ನಡಕ್ಕೆ : ನರಸಿಂಹಮೂರ್‍ತಿ ಟಿ.ಆರ್.

ಇಂಗ್ಲಿಶ್ ಮೂಲ : ನವೀನ್ ನಂಜುಂಡಪ್ಪ

(ಚಿತ್ರ: http://edition.channel5belize.com/)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *