ಓದು ಬಿಟ್ಟು ಉದ್ದಿಮೆ ಕಟ್ಟು!

David Karp

ನೆನ್ನೆ ತಾನೇ ಬಂದ ಸುದ್ದಿ, ಟಂಬ್ಲರ್ (Tumblr) ಎಂಬ ಕಂಪನಿಯನ್ನು ಯಾಹೂ (Yahoo!) ಕಂಪನಿಯು 1.1 ಬಿಲಿಯನ್ ಡಾಲರುಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದೆ. ಈ ಹಣವನ್ನು ರುಪಾಯಿಗಳಲ್ಲಿ ಹೇಳುವುದಾದರೆ 60,67,60,00,000 (ಆರು ಸಾವಿರದ ಅರವತ್ತೇಳು ಕೋಟಿ ಮತ್ತು ಅರವತ್ತು ಲಕ್ಶ) ರುಪಾಯಿಗಳು.

ಈ ಹಣದಲ್ಲಿ 253 ಮಿಲಿಯನ್ ಡಾಲರುಗಳಶ್ಟು ಹಣವು ಟಂಬ್ಲರ್ ಕಂಪನಿಯನ್ನು ಹುಟ್ಟು ಹಾಕಿ ಅದರ ಸಿ.ಇ.ಒ ಆಗಿದ್ದ  ಡೇವಿಡ್ ಕಾರ‍್ಪ್ ಅವರನ್ನು ಸೇರುತ್ತದೆ. ಡೇವಿಡ್ ಕಾರ‍್ಪ್ ಅವರು 26 ವರುಶ ವಯಸ್ಸಿನವರಾಗಿದ್ದು, 2007ರಲ್ಲೇ ಟಂಬ್ಲರ್ ಕಂಪನಿಯನ್ನು ಹುಟ್ಟು ಹಾಕಿದ್ದರು. ಕಾರ‍್ಪ್ ಅವರು ತಮ್ಮ 15ನೇ ವಯಸ್ಸಿನಲ್ಲೇ ಶಾಲೆಯಿಂದ ಹೊರನಡೆದಿದ್ದರು.

ಓದನ್ನು ನಡುವಿನಲ್ಲೇ ಬಿಟ್ಟು ಹೊರನಡೆದವರು ದೊಡ್ಡ ದೊಡ್ಡ ಕಂಪನಿಗಳನ್ನು ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಬಿಲ್ ಗೇಟ್ಸ್ ಅವರು ತಮ್ಮ ಕಾಲೇಜು ಓದನ್ನು ನಡುವಿನಲ್ಲೇ ಬಿಟ್ಟು ಮಯ್ಕ್ರೋಸಾಪ್ಟ್ ಕಂಪನಿ ಕಟ್ಟಿದರು. ಸ್ಟೀವ್ ಜಾಬ್ಸ್ ಅವರು ತಮ್ಮ ಕಾಲೇಜು ಓದನ್ನು ನಡುವಿನಲ್ಲೇ ಬಿಟ್ಟವರು, ಮುಂದಿನ ದಿನಗಳಲ್ಲಿ ಆಪಲ್ ಕಂಪನಿಯನ್ನು ಕಟ್ಟಿದರು. ಮಾರ‍್ಕ್ ಜುಕರ‍್ಬರ‍್ಗ್ ಅವರು ತಮ್ಮ ಕಾಲೇಜು ಓದನ್ನು ನಡುವಿನಲ್ಲೇ ನಿಲ್ಲಿಸಿ, ಪೇಸ್‍ಬುಕ್ ಕಂಪನಿಯನ್ನು ಕಟ್ಟಿದರು.

ಈ ದಿಗ್ಗಜರ ಸಾಲಿಗೇ ಡೇವಿಡ್ ಕಾರ‍್ಪ್ ಅವರೂ ನಿಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ತಮ್ಮ ಓದನ್ನು ನಡುವಿನಲ್ಲೇ ನಿಲ್ಲಿಸಿ ಕಂಪನಿಗಳನ್ನು ಕಟ್ಟುವ ಕೆಲಸಕ್ಕೆ ಕಯ್ ಹಾಕಿ ಗೆದ್ದವರ ಪಟ್ಟಿ ನೋಡಿದರೆ, ಓದು ಬಿಡುವುದಕ್ಕೂ ಕಂಪನಿ ಕಟ್ಟುವುದಕ್ಕೂ ಏನಾದರೂ ನಂಟಿದೆಯೇ ಎಂಬ ಕೇಳ್ವಿ ಮನಸಿನಲ್ಲಿ ಮೂಡುತ್ತದೆ. ಈ ಬಗ್ಗೆ ನಿಮಗೇನನ್ನಿಸುತ್ತದೆ?

ಮಾಹಿತಿ ಸೆಲೆ: wikipedia.org

(ಡೇವಿಡ್ ಕಾರ‍್ಪ್ ಚಿತ್ರ: bloomberg.com)

ಪ್ರಿಯಾಂಕ್ ಕತ್ತಲಗಿರಿ

4 ಅನಿಸಿಕೆಗಳು

  1. ಉದ್ದಿಮೆ ಕಟ್ಟೋ ಕೆಲಸ ಕನ್ನಡಿಗರಲ್ಲಿ ಹೆಚ್ಚ ಆಗಬೇಕಿದೆ, ಹಾಗಂತ ಎಲ್ಲರೂ ಶಾಲೆ ಬಿಟ್ರೆ ಕಷ್ಟ 🙂

  2. I think there can’t be any dense relation between “dropping-out” and becoming a web-star ! It is, of course, co’insidence that happens from the efforts made by the respective people.

  3. ಆನಂದ್ ಅವರೇ, ಈಗೀಗ ಓದು ಬಿಟ್ಟವರಿಗಿಂತ ಓದು ಮುಗಿಸಿದವರೇ ಮಟಸೇರುವುದು ಹೆಚ್ಚು. ಬೇಕಿದ್ದರೆ ಮಟಗಳಿಗೆ ಬೇಟಿಕೊಟ್ಟು ನೋಡಿ. ಅಲ್ಲಿರೋ ಹೊಸ ಕಾವಿಗಳೆಲ್ಲಾ ಡಿಗ್ರಿಗಳನ್ನು ಗುಡ್ಡೆ ಹಾಕಿಕೊಂಡವರೇ! 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.