ಮಳೆಗಾಲಕ್ಕೆ ಬಿಸಿಬಿಸಿ ಹಲಸಿನಕಾಯಿ ಚಿಪ್ಸ್!
ಹಲಸಿನಕಾಯಿ ಚಿಪ್ಸ್
ಬೇಕಾಗುವ ಸಾಮಗ್ರಿಗಳು: ಹಲಸಿನಕಾಯಿ, ಎಣ್ಣೆ, ಉಪ್ಪು, ಒಣಮೆಣಸಿನಕಾಯಿಯ ಪುಡಿ .
ಮಾಡುವ ಬಗೆ
ಹಲಸಿನ ಕಾಯಿಯನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ. ಅಂಟಾಗದಿರಲು ಕಯ್ಗೆ ಎಣ್ಣೆ ಹಚ್ಚಿಕೊಂಡು ತೊಳೆಗಳನ್ನು ಬಿಡಿಸಿಕೊಳ್ಳಿ. ಬಿಡಿಸಿದ ತೊಳೆಗಳನ್ನು ಚಾಕು ಅತವಾ ಈಳಿಗೆ ಮಣೆಯಲ್ಲಿ ನೀಳವಾಗಿ, ತೆಳುವಾಗಿ ಹೆಚ್ಚಿಕೊಳ್ಳಿ. ಎಣ್ಣೆಯಲ್ಲಿ ಕರಿಯಿರಿ. ಕರಿದ ಚಿಪ್ಸಿಗೆ ರುಚಿಗೆ ತಕ್ಕಶ್ಟು ಉಪ್ಪನ್ನು, ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ. ಚಿಪ್ಸ್ ತಿನ್ನಲು ರುಚಿಕರವಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ತಿನ್ನಲು ಬಲು ಆನಂದಮಯ.
ಹಲನಸಿನಕಾಯಿ ನೀರ್ ಸಾರು
ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿಯ ತೊಳೆ 10 ರಿಂದ 15, ಸಣ್ಣ ಮೆಣಸು 5 ರಿಂದ 6, ಲಿಂಬು ರಸ 5 ರಿಂದ 6 ಚಮಚ, ಉಪ್ಪು ರುಚಿಗೆ ತಕ್ಕಶ್ಟು, ಒಗ್ಗರಣೆಗೆ ಎಣ್ಣೆ, ಕರಿಬೇವಿನಸೊಪ್ಪು, ಇಂಗು, ಸಾಸಿವೆ.
ಮಾಡುವ ಬಗೆ
ಹಲಸಿನ ಬೀಜ ತೆಗೆದು ತೊಳೆಯನ್ನು ಒಂದರಲ್ಲಿ ನಾಲ್ಕು ಬಾಗ ಮಾಡಿ ಕತ್ತರಿಸಿಕೊಂಡು ಅಯ್ದು ನಿಮಿಶ ಬೇಯಿಸಿಕೊಳ್ಳಿ. ಇದಕ್ಕೆ ಜಜ್ಜಿದ ಸಣ್ಣ ಮೆಣಸು, ಲಿಂಬು, ಉಪ್ಪು, ಸುಮಾರು ಒಂದು ಲೀಟರ್ ನೀರು ಸೇರಿಸಿ ಮತ್ತೆ ಅಯ್ದು ನಿಮಿಶ ಕುದಿಸಿ. ನಂತರ ಒಗ್ಗರಣೆ ಹಾಕಿ. ಜೋರಾಗಿ ಮಳೆ ಬರುತ್ತಿರುವಾಗ ಈ ಸಾರು ಅನ್ನದೊಂದಿಗೆ ಬಲು ಹಿತ.
ಇತ್ತೀಚಿನ ಅನಿಸಿಕೆಗಳು