ಕೆನಡಿಗನ ಹಾಡು…
– ಬರತ್ ಕುಮಾರ್.
{ಬ್ರಯಾನ್ ಅಡಮ್ಸ್ ಎಂಬ ಕೆನಡಿಗ ಪಾಪ್ ಹಾಡುಗಾರನ ಹಾಡನ್ನು ಕನ್ನಡದಲ್ಲಿ ಮರುಹುಟ್ಟಿಸಲಾಗಿದೆ…ಓದಿ, ಹಾಡಿ ನಲಿಯಿರಿ!}
ನಾ ಬಂದೆ ನಾನು ನಾನೇ
ಬೇರೆಲ್ಲೂ ನಾ ಇರಲಾರೆ
ಬರೀ ನಾನು ಮತ್ತು ನೀನು
ಕನಸ ನನಸಾಗಿಸಲು ಬಂದೆ ಇಂದು ನಾನು || ಪ ||
ಹೊಸ ನೆಲ ಹೊಸ ಮೊಗಸು
ಹೊಸ ಬಡಿತದ ಸೊಗಸು
ಹೊಸ ನಾಳು ಹೊಸ ಹೂಟ
ನಿನಗಾಗಿ ಕಾಯುತಿರುವೆ ಹಿಡಿದು ಹಟ
ನಾ ಬಂದೆ ನಾನು ನಾನೇ ||
ಈಗ ತಾನೆ ಸುರುವಾಗಿದೆ
ಹೊತ್ತು ಕಳಚಿ ನಮ್ಮ ಹೊತ್ತು ಬಂದಿದೆ
ಇನ್ನೂ ಬಲವಿದೆ ಅದೇ ತೋಳಲಿ
ಅದೇ ನೆಲದಲಿ, ತಾಯ್ನೆಲದಲಿ
ನಾ ನಿನ್ನ ಜೊತೆಗಿರಲು
ನೆಲವು ಕೂಡಲೆ ಚಿಗುರೊಡೆಯಲು
ಎಂದೆಂದಿಗೂ ನಾ ಇಲ್ಲಿರಲು
ಅಡತಡೆಗಳು ಚದುರುತಿರಲು
ನಾ ಬಂದೆ ನಾನು ನಾನೇ ||
(ಚಿತ್ರ: http://api.tape.tv/images/video/15111.jpg)
(ಓಡುತಿಟ್ಟ: http://www.youtube.com/watch?v=G6xr6VKg7sE)
ಒಳ್ಳೆಯ ಪ್ರಯತ್ನ! ಕನ್ನಡವನ್ನು ಹಲವು ಬಗೆಯ ಹೊಸ ಹೊಸ ಪ್ರಕಾರಗಳಲ್ಲಿ ಬಳಸಬಹುದು ಅನ್ನುವ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲಸ ಮೆಚ್ಚುವಂತದ್ದು! ಮುಂದೆ “ಹೋಟೆಲ್ ಕ್ಯಾಲಿಫಾರ್ನಿಯ” ಮೇಲೂ ಒಂದು ಹಾಡು ಬರಲಿ ನಿಮ್ಮಿಂದ!
ನನ್ನಿ ವಾಸುಕಿಯವರೆ, ಇನ್ನು ಹೆಚ್ಚಿನ ರಾಕ್ ಹಾಡುಗಾರರ ಹಾಡನ್ನು ಮರುಹುಟ್ಟಿಸಬೇಕೆಂದಿದ್ದೇನೆ.