ಹಕ್ಕಿ ಮತ್ತು ಹೂವು
ಗಿಡದಿಂದ ಗಿಡಕ್ಕೆ ಹಾರುವ ಹಕ್ಕಿ ನಾನು,
ಪ್ರತಿ ಗಿಡದಲು ಹೊಸ ತಾಣ ಪಡೆದೆ ನಾನು,
ನೇರಳೆಯ ಹೊಳಪಿನ ಹೂವನು ಕಂಡೆ ನಾನು,
ಬಳಿಗೆ ಬಾ ಎಂದು ಕಯ್ ಬೀಸಿ ಕರದೆ ನೀನು,
ಗಾಳಿಗೆ ಹೆಣ್ಣಿನ ನಾಚಿಕೆಯಂತೆ ನುಲಿವೆ ನೀನು,
ನಿನ್ನ ಈ ನಲ್ಗುಣಿತವ ಕಂಡು ಪುಳಕಿತನಾದೆ ನಾನು,
ಬದುಕ ತುಂಬ ನಿನ್ನ ಮಡಿಲಲಿ ನೆಲೆಸುವೆ ನಾನು,
ಹೀಗೆ ಕಣ್ಣಿನಲಿ ಕಣ್ಣಿಟ್ಟು ಸದಾ ನೋಡುವೆನು ನಾನು
(ಚಿತ್ರ: http://universini.com/)
ಇತ್ತೀಚಿನ ಅನಿಸಿಕೆಗಳು