ಕವಿತೆ: ಕೆಲಸ ಕೊಡಿ

– ವೆಂಕಟೇಶ ಚಾಗಿ.ಹೊರಾಟ, ಬದುಕು, life, challenges

ನಾನು ಶಕ್ತಿ ಇಲ್ಲದ ಬಡವನಲ್ಲ
ಕೆಲಸವಿಲ್ಲದ ಬಡವ
ದುಡಿಯುವ ಉತ್ಸಾಹ
ಗಳಿಸುವ ಚಲ
ಸಾದಿಸುವ ಹಂಬಲ
ಎಲ್ಲವೂ ಇದೆ ನನ್ನೊಳಗೆ
ಕೆಲಸ ಕೊಡಿ ಉಚಿತವಲ್ಲ

ಬೆಳೆದ ಬೆಳೆಗೆ ಬೆಲೆ ಇಲ್ಲ
ಬದುಕಿಗೆ ನೆಲೆ ಇಲ್ಲ
ಕ್ಶಣ ಹೊತ್ತಿನ ಹಸಿವು
ನೀಗಿಸಿದರೆ ಏನು ಪಲ
ರಟ್ಟೆಯೊಳಗಿನ ಶಕ್ತಿ ಕೊಂದುತ್ತಿದೆ
ಶ್ರಮಕ್ಕೆ ತಕ್ಕ ಬೆಲೆ ಇಲ್ಲ
ಕೆಲಸ ಕೊಡಿ ಉಚಿತವಲ್ಲ

ನನಗೆ ಗೊತ್ತು
ನೀವು ಕೆಲಸ ಕೊಡುವ ದನಿಕರಲ್ಲ
ಎಲ್ಲರಿಗೂ ಕೆಲಸ ಕೊಡುವ
ಕಜಾನೆ ನಿಮ್ಮೊಳಗಿಲ್ಲ
ಕೆಲಸವನ್ನು ನಾವೇ ಹುಡುಕುವೆವು
ವಿದ್ಯೆ ಕೊಡಿ ಉಚಿತವಾಗಿ
ಆರೋಗ್ಯ ಕೊಡಿ ಉಚಿತವಾಗಿ
ಇಲ್ಲದಿದ್ದರೆ ಕೆಲಸ ಕೊಡಿ ಉಚಿತವಲ್ಲ

ನನ್ನ ಅಜ್ಜನು ಬಡವ
ನನ್ನ ಅಪ್ಪನೂ ಬಡವ
ಈಗ ನಾನು ಬಡವ
ಬಡತನ ನಿಲ್ಲುವುದು ಹೇಗೆ
ಕೆಲಸ ಹುಟ್ಟಿಸುವ ಬೀಜ ಬಿತ್ತಿ
ಕಾಲಹರಣದ ಕಳೆ ಕೀಳಿಬಿಡಿ
ಸ್ವಾಬಿಮಾನವ ಉಚಿತ ಕೊಡಿ
ಇರುವ ಕೆಲಸವನ್ನು ಕೀಳಬೇಡಿ
ಇಲ್ಲದಿದ್ದರೆ ಕೆಲಸ ಕೊಡಿ ಉಚಿತವಲ್ಲ

(ಚಿತ್ರ ಸೆಲೆ: 8-principles-of-life )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks