ಪಾರಿಜಾತ
– ಬರತ್ ಕುಮಾರ್.
ಹೂವು ನಾನು
ಪಾರಿಜಾತ ಎಂಬ ಹೂವು ನಾನು
ಒಳನುಡಿಗಳ ಹೇಳುವೆ ನಾನು
ಬಿಡದೆ ಕೇಳು ನೀನು | ಪ |
ಮೇಲೆ ಬಿಳಿ ನಲಿವು
ಕೆಳಗೆ ಕೆಂಪು ಕೆಂಪು ನೋವು
ಹೊತ್ತಾರೆಗೇನೆ ನನ್ನ
ಹೆತ್ತ ಮರವೇ ದೂಡುವುದು
ಮೆತ್ತಗೆ ನೆಲಕ್ಕೆ
ಕತ್ತಲಾಗುವವರೆಗೂ ನೋಡರಾರೂ ಎನ್ನ | 1 |
ಬಲು ಬೇಗ ಹೋಗುವೆ ಬಾಡಿ
ಹೇಳ ತೀರದು ನನ್ನ ಪಾಡು
ಯಾವ ದೇವರಿಗೂ ನಾನು ಬೇಡ
ಆದರೂ ನನಗಿಲ್ಲ ದುಗುಡ | 2 |
ಚಿಕ್ಕಮಕ್ಕಳೇ ಎನ್ನ ಅಚ್ಚುಮೆಚ್ಚು
ಲಂಗದಲ್ಲಿ ನನ್ನ ಪೊರೆವರು ಬಚ್ಚಿ
ಸಂಗದಲಿ ಆಡುವರು ನಲಿವರು ನೆಚ್ಚಿ
ಹೂವು ನಾನು
ಪಾರಿಜಾತ ಎಂಬ ಹೂವು ನಾನು | 3 |
(ಚಿತ್ರ: http://gubbacchi.blogspot.in)
ಇತ್ತೀಚಿನ ಅನಿಸಿಕೆಗಳು