ತ್ಸೊಮೊರಿರಿ ಸರೋವರದಲ್ಲಿ ಅಲೆ

ದೇವೇಂದ್ರ ಅಬ್ಬಿಗೇರಿ

DSC06334

ಬಯಲಿನಿಂದ ತೂರಿ ಬಂದ ಗಾಳಿ ಪಿಸುಗುಟ್ಟಿದೆ,
ನಾನೆಶ್ಟು ನಿಶ್ಚಯ.
ಯಾವ ತಡೆಯು ಇರದೆ ಹರಿಯುವ ನದಿಯ
ಬಣ್ಣನೆ ಎಬ್ಬಿಸಿದೆ ಪುಳಕದ ತೆರೆಯ

ದ್ಯೆತ್ಯ ಹಿಮಾಲಯದ ಎಲ್ಲೆಗಳ ಮೀರಿ
ನದಿಯ ಸೇರುವ ಬಯಕೆಯಾಗಿದೆ.
ನಿರ‍್ಮಲ ನೀರಿನ ದೇಹದಲ್ಲಿ
ಜೀವನದಿಯ ಪ್ರತಿಬಿಂಬ ಮೂಡಿದೆ

ಅವಳು ಜೀವನ ತಂತುವಂತೆ
ಅವಳು ಹರಿದಲೆಲ್ಲಾ ದಟ್ಟ ಜೀವನ ಸಂತೆ.
ಹಿಗ್ಗು-ಕುಗ್ಗು, ವಿಶ-ಅಮ್ರುತ ಅವಳ ದಾರಿಯಲ್ಲಿ
ಎಲ್ಲವನ್ನು ಅನುಬವಿಸಿ ಕೊನೆಯಲ್ಲಿ ಕಾಣುವಳಂತೆ ಕೊಲ್ಲಿ.

ಯಾವ ಜಂಜಾಟವಿಲ್ಲದೆ, ನಿಂತಲ್ಲೆ ನಿಂತು
ನನ್ನೊಂದಿಗೆ ನಾನು ತಲ್ಲೀನ
ನದಿಯ ಸೆರುವ ಸೆಳೆತ
ಶಾಂತ ಮನದಲ್ಲಿ ಎಬ್ಬಿಸಿದೆ ಚಂಡಮಾರುತ

ಸಾಕು ಇನ್ನು ಈ ಒಂಟಿತನ, ಉಸಿರುಗಟ್ಟಿಸಿದೆ,
ಈ ಶಾಂತತೆಯೊ ಬೇಸರ
ಏಕಾಂತತೆ, ಏಕಾನತೆ ಅನುಬವಿಸಲಸಾದ್ಯ
ಜಲದಾರೆಯ ಅಪ್ಪುವ ಕಾತರ

(ತಿಟ್ಟದ ಸೆಲೆ: : ಬರಹಗಾರರ ಆಯ್ಕೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: