ಕವಿತೆ : ವನ್ಯಜೀವಿಗಳ ಬೇಡಿಕೆ

ಡಾ|| ನ. ಸೀತಾರಾಮ್

ಕಾಡುಜೀವಿ, kaadujeevi

ಎಲ್ಲರೊಡನೆ ಬಾಳಬೇಕೆಂಬ ಅಬಿಲಾಶೆ ಎಮಗೆ
ದರೆಯಲಿರುವ ಜೀವ ಸಂಕುಲದ ಬಾಗವಾಗೆ
ಹಸಿದಾಗ ತಿನ್ನುವೆವಶ್ಟೆ ಬಾಯಿಚಪಲವಿಲ್ಲ
ಸ್ರುಶ್ಟಿಗಾಗಿ ಸಂಗಾತಿಯ ಬಯಸುವೆವು ರಂಜನೆಗಲ್ಲ
ವನ್ಯಜೀವಿಗಳು ನಾವು, ದುರಾಸೆ ನಮಗಿಲ್ಲ
ನೆಮ್ಮದಿಯಿಂದ ನಮ್ಮನೇಕೆ ಬಾಳಗೊಡುವುದಿಲ್ಲ

ಮಾನವನು ಕೂಡ ನಮ್ಮಂತೆ ಸರಳವಾಗಿ ಏಕಿಲ್ಲ
ಹೊಟ್ಟೆ ತುಂಬಿದ ಮೇಲೆ ತಿಂದು ಬೊಜ್ಜು ಬೆಳೆಸುವನಲ್ಲ
ಅವಶ್ಯಕತೆಗಿಂತ ಹೆಚ್ಚು ಬಯಸಿ ಜಗಕೆ ಕುತ್ತು ತರುವನಲ್ಲ
ಕಾಡು ಕಡಿದು ನಗರ ಬೆಳೆಸಿ ಪರಿಸರವ ಕೆಡಿಸಿದನಲ್ಲ
ಹೊಗೆಯ ಬಿಡುವ ಕಾರ‍್ಕಾನೆ ವಾಹನಗಳ ತುಂಬಿ
ಗಾಳಿ ನೀರು ಬೂಮಿಯನ್ನು ಕಲ್ಮಶಗೊಳಿಸಿದನಲ್ಲ
ನಾವು ಬಾಳುವ ಜಾಗವನ್ನು ಕಿತ್ತುಕೊಂಡಿಹನಲ್ಲ

ಮನುಜ ನಿನಗೆ ಒಬ್ಬನೆ ಬೆಳೆಯಬೇಕೆಂಬ ಹಂಬಲವೆ
ನಾವು ಕೂಡ ಬೂಮಿತಾಯ ಮಕ್ಕಳಲ್ಲವೆ
ವನ್ಯರಾಶಿ ಜೀವಜಂತುಗಳು ನಿನಗಿಂತ ಹಿರಿಯರಲ್ಲವೆ
ನಮಗೂ ಕೂಡ ಬೂಮಿ ಮೇಲೆ ಹಕ್ಕು ಇಲ್ಲವೆ
ಅಶ್ಟು ಇಶ್ಟು ಕರಣೆ ತೋರು ದೈನ್ಯವಾಗಿ ಪ್ರಾರ‍್ತಿಸುವೆ

( ಚಿತ್ರ ಸೆಲೆ : pexels.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Raghuramu N.V. says:

    ಚೆನ್ನಾಗಿದೆ ಸರ್

  2. Sundaresh N says:

    ?ಗುಡ್ ?

ಅನಿಸಿಕೆ ಬರೆಯಿರಿ:

%d bloggers like this: