ನೆಂಚಿಕೆಗಾಗಿ ರುಚಿ ರುಚಿ ಗೊಜ್ಜುಗಳು

ಕಲ್ಪನಾ ಹೆಗಡೆ

tomato-onion-garlic-01

ದಿಡೀರ್ ಟೊಮೇಟೊ ಗೊಜ್ಜು

ಬೇಕಾಗುವ ಪದಾರ್‍ತಗಳು: ಟೊಮೇಟೊ ಹಣ್ಣು ಕಾಲು ಕೆ. ಜಿ., 4 ಹಸಿಮೆಣಸಿನಕಾಯಿ, 50 ಗ್ರಾಂ ಈರುಳ್ಳಿ, 1 ಚಮಚ ಉದ್ದಿನಬೇಳೆ, 1 ಚಮಚ ಕಡ್ಲೆಬೇಳೆ, 2 ಚಮಚ ಸಾರಿನ ಪುಡಿ, ರುಚಿಗೆ ತಕ್ಕ ಉಪ್ಪು, ಸಾಸಿವೆ, ಒಣಮೆಣಸಿನಕಾಯಿ, ಎಣ್ಣೆ, ಇಂಗು.

ಮಾಡುವ ಬಗೆ: ಟೊಮೇಟೊ ಹಣ್ಣುಗಳನ್ನು ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಉದ್ದಿನಬೇಳೆ, ಕಡ್ಲೆಬೇಳೆ, ಸಾಸಿವೆ, ಹಸಿಮೆಣಸಿನಕಾಯಿ, ಇಂಗು, ಚಿಟಿಕೆ ಅರಿಶಿನ ಪುಡಿ ಹಾಕಿ ಹೆಚ್ಚಿದ ಟೊಮೇಟೊ ಹಾಗೂ ಈರುಳ್ಳಿಯನ್ನು ಹಾಕಿ ಆರ್‍ದ ಲೋಟ ನೀರು, ಸಾರಿನ ಪುಡಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ 5 ನಿಮಿಶ ಬೇಯಿಸಿಕೊಳ್ಳಿ. ಒಣಮೆಣಸಿನ ಕಾಯಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ. ತಯಾರಿಸಿದ ದಿಡೀರ ಟೊಮೇಟೊ ಗೊಜ್ಜನ್ನು ಚಪಾತಿಗೆ ನೆಂಚಿಕೊಳ್ಳಲು ನೀಡಿ. ಅನ್ನದೊಂದಿಗೂ ಸವಿಯಲು ನೀಡಬಹುದು.

ಈರುಳ್ಳಿ ಗೊಜ್ಜು

ಬೇಕಾಗುವ ಪದಾರ್‍ತಗಳು: ಆರ್‍ದ ಕೆ.ಜಿ. ಈರುಳ್ಳಿ, ಹುಣಸೆಹಣ್ಣು, ಉಪ್ಪು ರುಚಿಗೆ ತಕ್ಕಂತೆ, 2 ಚಮಚ ಕಾರದ ಪುಡಿ, 1 ಚಮಚ ಸಾಸಿವೆ, 2 ಚಮಚ ಬೆಲ್ಲದ ಪುಡಿ, 4 ಒಣಮೆಣಸಿನಕಾಯಿ, ಎಣ್ಣೆ.

ಮಾಡುವ ಬಗೆ: ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಬಾಣಲಿಗೆ ಎಣ್ಣೆ ಹಾಕಿ ಒಲೆಯ ಮೇಲಿಡಿ. ಎಣ್ಣೆ ಕಾದ ಬಳಿಕ ಸಾಸಿವೆ ಹಾಕಿ ಆಮೇಲೆ ಒಣಮೆಣಸಿನ ಕಾಯಿ ಚೂರು, ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಂಡು ಹುರಿಯಿರಿ. ಚೆನ್ನಾಗಿ ಹುರಿದ ನಂತರ ಹುಣಸೆಹಣ್ಣಿನ ರಸ, ಬೆಲ್ಲ, ಕಾರದಪುಡಿ ಹಾಕಿ ಚೆನ್ನಾಗಿ ಬೆರೆಸಿ. ಮಿಶ್ರಣ ಕೆಂಪು ಬಣ್ಣ ಬಂದಾಗ ಬಾಣಲೆ ಕೆಳಗಿಳಿಸಿ. ಈ ಗೊಜ್ಜನ್ನು ರೊಟ್ಟಿ, ಚಪಾತಿ, ದೋಸೆಗೆ ನೆಂಚಿಕೊಂಡು ತಿನ್ನಬಹುದು. ಅನ್ನದ ಜೊತೆಗೂ ಸೇರಿಸಿ ತಿನ್ನಬಹುದು.

ಬೆಂಡೆಕಾಯಿ ಗೊಜ್ಜು

ಬೇಕಾಗುವ ಪದಾರ್‍ತಗಳು: ಅರ್‍ದ ಕೆ.ಜಿ. ಬೆಂಡೆಕಾಯಿ, 2 ಹಸಿಮೆಣಸಿನಕಾಯಿ, ಅರ್‍ದ ಬಾಗ ತೆಂಗಿನಕಾಯಿ, ಕೊತ್ತಂಬರಿಸೊಪ್ಪು, ಉಪ್ಪು, ಸಾಸಿವೆ, ಎಣ್ಣೆ, ಸ್ವಲ್ಪ ಹುಣಸೆಹಣ್ಣು, ಒಂದು ತುಂಡು ಬೆಲ್ಲ, ಇಂಗು, ಕರಿಬೇವು, ಒಣಮೆಣಸಿನಕಾಯಿ.

ಮಾಡುವ ಬಗೆ: ಕೊತ್ತಂಬರಿಸೊಪ್ಪು, ಮೆಣಸಿನಕಾಯಿ, ಇಂಗು, ಉದ್ದಿನಬೇಳೆ, ಕಡಲೆಬೇಳೆ, ಎಣ್ಣೆ ಹಾಕಿ ಹುರಿದು ಕೊಬ್ಬರಿ ಹಾಕಿ ರುಬ್ಬುವುದು. ನಂತರ ಬೆಂಡೆಕಾಯಿಯನ್ನು ಹೆಚ್ಚಿಕೊಂಡು ಬಾಣಲಿಗೆ 2 ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ. ಚೆನ್ನಾಗಿ ಹುರಿದ ಮೇಲೆ ರುಬ್ಬಿದ ಮಿಶ್ರಣವನ್ನು ಬಾಣಲಿಗೆ ಹಾಕಿ ಹುಣಸೆಹಣ್ಣನ್ನು ಕಿವುಚಿ ಸೇರಿಸಿ. ಎಲ್ಲವೂ ಚೆನ್ನಾಗಿ ಬೆಂದ ನಂತರ ಬೆಲ್ಲ ಹಾಕಿ ಸಾಸಿವೆ, ಇಂಗು, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ರೆಡಿ ಆದ ಬೆಂಡೆಕಾಯಿ ಗೊಜ್ಜನ್ನು ಚಪಾತಿಗೆ ನೆಂಚಿಕೊಳ್ಳಲು ಹಾಗೂ ಅನ್ನದೊಂದಿಗೆ ತಿನ್ನಲು ನೀಡಿ.

(ಚಿತ್ರ ಸೆಲೆ: qusouthafrica.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications