ಕರ‍್ನಾಟಕದ ಹಿತ ಕಾಯ್ವರೇ ಮೋದಿ-ಗಾಂದಿಯರು?
ನರೇಂದ್ರ ಮೋದಿಯವರು ಮುಂದಿನ ಲೋಕಸಬಾ ಚುನಾವಣೆಯಲ್ಲಿ ‘ಬಾ.ಜ.ಪ’ದ ಪ್ರದಾನ ಮಂತ್ರಿ ಅಬ್ಯರ್‍ತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಬ್ರಮಿಸಿತ್ತಿರುವ ಹಾಗೂ ರಾಹುಲ್ ಗಾಂದಿಯವರು ಮುಂದಿನ ಪ್ರದಾನಿಯಾಗಬಹುದೆಂದು ನಿರೀಕ್ಶಿಸುತ್ತಿರುವ ಎಲ್ಲಾ ಕನ್ನಡಿಗರು ಯೋಚಿಸಬೇಕಾದ ವಿಚಾರಗಳು…
ಮೇಲೆ ಸೂಚಿಸದ ಯಾರೊಬ್ಬರು ಪ್ರದಾನಿಯಾದರೂ
- ನಮ್ಮ ಕರ‍್ನಾಟಕ ರಾಜ್ಯದ ಮೇಲೆ ನಡೆಯುತ್ತಿರುವ ಕೇಂದ್ರ ಸರ್‍ಕಾರದ ತಾರತಮ್ಯ ನೀತಿ ಕೊನೆಯಾಗುವುದೇ?
- ನದಿ ನೀರು ಹಂಚಿಕೆಯ ವಿವಾದದಲ್ಲಿ ನ್ಯಾಯ ಸಿಗುವುದೇ?
- ಸರಿಯಾದ ಪ್ರಾದೇಶಿಕ ಬಾಶಾ ನೀತಿ ಜಾರಿಗೆ ಬರುವುದೇ?
- ವಿತ್ತೀಯ ಮತ್ತು ರಯ್ಲ್ವೆ ಆಯವ್ಯಯದಲ್ಲಿ ರಾಜ್ಯದ ಮೇಲೆ ನಡೆಯುತ್ತಿರುವ ಮಲತಾಯಿ ದೋರಣೆ ಕೊನೆಯಾಗುವುದೇ?
- ಕೇಂದ್ರ ಸರ‍್ಕಾರಿ ನವ್ಕರರ ಆಯ್ಕೆಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಅನ್ಯಾಯ ಕೊನೆಗಾಣುವುದೇ?
- ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ನಿಲ್ಲುವುದೇ?
ಇದೆಲ್ಲವು ಸಾದ್ಯವಾಗುವುದು ನಾಡು, ನುಡಿ, ನೆಲಗಳ ಮೇಲೆ ಕಾಳಜಿ ಇರುವ ಸ್ವಾಬಿಮಾನಿ ಸಂಸದರಿಂದ ಮಾತ್ರ. ಆದ್ದರಿಂದ ಯಾವುದೇ ರೀತಿಯ ಮೋದಿ-ಗಾಂದಿ ಮೋಡಿಗೆ ಬೀಳದೆ ರಾಜ್ಯದ ಹಿತಾಸಕ್ತಿ ಕಾಪಾಡುವ ಅಬ್ಯರ‍್ತಿಗಳನ್ನು ಪಕ್ಶಬೇದ ಮರೆತು ಆರಿಸಿ.
(ಚಿತ್ರದ ಸೆಲೆ: teluguone.com)
Dude you’ve got many serious spelling mistakes in ur ‘kannada’
I see a lot of ‘ottus’ missing from Kannada language in these Honalu posts.. gaurdians of the language and culture first should ensure that spellings are all perfect
ಪ್ರತಾಪ್ ಅವರೇ,
ಈ ಬರಹದಲ್ಲಾಗಲೀ ಇಲ್ಲವೇ ಇತರೆ ಹೊನಲಿನ ಬರಹಗಳಲ್ಲಾಗಲೀ ಒತ್ತುಗಳನ್ನು ಬಿಡಲಾಗಿಲ್ಲ.
ನೀವು ಮಹಾಪ್ರಾಣಗಳು ಮತ್ತು ಇನ್ನೂ ಕೆಲವು ಅಕ್ಶರಗಳ ಬಗ್ಗೆ ಹೇಳುತ್ತಿರುವಿರಾದರೆ ಎಲ್ಲರಕನ್ನಡಕ್ಕೆ ನಿಮಗೆ ಸ್ವಾಗತ. ಇದನ್ನು ನೋಡಿ: http://wp.me/P3kg8T-29