ಹಾರುವ ಮುಂಚೆ ಕಾಡುವ ಚಿಂತೆ

ರತೀಶ ರತ್ನಾಕರ

800px-Archilochus-alexandri-002-edit

ಹಾರಬೇಕಿದೆ ನಗೆದು ಮುಗಿಲೆತ್ತರಕೆ
ಸಾಗಬೇಕಿದೆ ಹಾದಿ ದೂರ ದೂರಕೆ
ಆದರೂ ಒಳಗೊಳಗೆ ಒಂದು ಹೆದರಿಕೆ
ನಾ ಬಡಿಯುವ ಬಿರುಸಿಗೆ
ಎಲ್ಲಿ ಹರಿದು ಬಿಡುವುದೋ ರಕ್ಕೆ?

ಹುಟ್ಟಿದಾಗಿನಿಂದ ಬೆಳೆದ ಬೆಚ್ಚನೆಯ ಗೂಡು
ಗುಟುಕ ನುಂಗಿ ಬಲಿತ ನೆಮ್ಮದಿಯ ಬೀಡು
ಇಲ್ಲೇ ಇರುವುದಾದರೂ ಹೇಗೆ?
ಬಿಟ್ಟು ಹೋಗುವುದಾದರೂ ಹೇಗೆ?

ಹಾರುವ ತುಡಿತವೋ? ಬಿಡುಗಡೆಯ ಮಿಡಿತವೋ?
ತುತ್ತಿನ ಚೀಲವ ತುಂಬುವ ತವಕವೋ?
ಒಟ್ಟಿನಲ್ಲಿ ಹೊರಟಿದೆ ಹಾರಾಡಲು
ಪುಟ್ಟ ಕಣ್ಣಲ್ಲಿ ಬಟ್ಟ ಬಯಲನ್ನು ಕಾಣಲು|

ದೂರ ಸೇರಿದ ಮೇಲೆ ತೊರೆದ ತೀರ ಕರೆಯದೇ?
ಇದ್ದ ನೆಲವು ಮರೆತು,
ಹೋಗಿ ಬಿದ್ದ ನೆಲವು ಮೆರೆಯುವುದೇ?
ಹಿಂತಿರುಗಿ ಬಂದು ಸೇರ ಬಯಸಿದೆ ಒಡಲು
ಹಾರಿ ಹೋದರು ದಾಟಿ ಹಲವಾರು ಕಡಲು

(ಚಿತ್ರ: http://commons.wikimedia.org/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: