ನವೆಂಬರ್ 6, 2013

ಮೂಳ್ವಡದಲ್ಲಿ ರಾಜಕೀಯ ಎಚ್ಚರದ ಹೊಸಗಾಳಿ

– ಜಯತೀರ‍್ತ ನಾಡಗವ್ಡ. ಮೂಳ್ವಡದ ನಾಡುಗಳ ಹತ್ತು ಸ್ತಳೀಯ ಪಕ್ಶಗಳು ಸೇರಿ ಹೊಸದೊಂದು ಆಳ್ವಿಕೆಯ ಕೂಟಕ್ಕೆ ಹುಟ್ಟು ನೀಡಿವೆ. ಇದನ್ನು ನಾರ‍್ತ್ ಈಸ್ಟ್ ರೀಜನಲ್ ಪೂಲಿಟಿಕಲ್ ಪ್ರಂಟ್ (ಮೂಳ್ವಡದ ಸ್ತಳೀಯ ಆಳ್ವಿಕೆಯ ಕೂಟ)...

ಕನ್ನಡ ಬರಹಗಾರರ ಕೀಳರಿಮೆ

– ಡಿ.ಎನ್.ಶಂಕರ ಬಟ್. ಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು...

ಟಗರು ಮತ್ತು ಪ್ರೀತಿ

-ಸಿ.ಪಿ.ನಾಗರಾಜ   ನಾನು  ಏಳೆಂಟು  ವರುಶದ  ಹುಡುಗನಾಗಿದ್ದಾಗ ನಡೆದ ಪ್ರಸಂಗವಿದು. ನಮ್ಮೂರಿನಲ್ಲಿ ಒಂದು ದಿನ ಬೆಳಗ್ಗೆ ಇಬ್ಬರು ಆಳುಗಳೊಡನೆ ಹೊಲದ ಬಳಿಗೆ ಹೋದೆನು. ನಮ್ಮ ಸಂಗಡ ಮನೆಯಿಂದ  ಒಂದು ಟಗರು ಕೂಡ ಬಂದಿತ್ತು. ಆ ವರುಶ ಮಳೆಗಾಲ ಚೆನ್ನಾಗಿ ನಡೆದು ಹೊಲಮಾಳದಲ್ಲಿ ಎತ್ತ ನೋಡಿದರೆ ಅತ್ತ ರಾಗಿ ಪಯಿರುಗಳು  ತೆಂಡೆ ತೆಂಡೆಗಳಾಗಿ ಕವಲೊಡೆದು ಸೊಂಪಾಗಿ ಬೆಳೆದು ಹಚ್ಚಹಸಿರು ಕಣ್ಣಿಗೆ ರಾಚುತ್ತಿತ್ತು. ಸಾಲಾರಂಬದಲ್ಲಿ ಬೆಳೆದು ನಿಂತಿದ್ದ ಅವರೆ-ಹುಚ್ಚೆಳ್ಳು-ನವಣೆ-ಜೋಳ-ತೊಗರಿಯ ಗಿಡಗಳು ಬಿಳಿ ಹಳದಿ ಬಂಗಾರದ ಬಣ್ಣಬಣ್ಣದ ಹೂವುಗಳಿಂದ ತುಂಬಿ ಕಂಗೊಳಿಸುತ್ತಿದ್ದವು. ಹೊಲದೊಳಕ್ಕೆ  ಬರುತ್ತಿದ್ದಂತೆಯೇ ಆಳುಗಳು ಟಗರಿನ ಕತ್ತಿನಲ್ಲಿದ್ದ ಹುರಿಯನ್ನು ಬಿಚ್ಚಿ. ಅದು ತನಗೆ ಬೇಕೆಂದ ಕಡೆ ಮೇಯಲೆಂದು ಬಿಟ್ಟ ನಂತರ, ನನ್ನನ್ನು ಕುರಿತು “ನೀವು...

Enable Notifications OK No thanks