’ಹೊನಲು’ ಬರಹಗಾರ ಡಾ. ಡಿ. ಎನ್. ಶಂಕರಬಟ್ಟರಿಗೆ ಪಂಪ ಪ್ರಶಸ್ತಿ

ಕಿರಣ್ ಬಾಟ್ನಿ.

dnsಇದೀಗ ಬಂದ ಸುದ್ದಿ: ಜಗತ್ತಿನ ಹೆಸರಾಂತ ನುಡಿಯರಿಗರಲ್ಲಿ ಒಬ್ಬರೆನಿಸಿಕೊಂಡು, ’ಎಲ್ಲರಕನ್ನಡದ’ದ ಬೀಜವನ್ನು ಬಿತ್ತಿ, ನಮ್ಮ ’ಹೊನಲು’ ಮಿಂಬಾಗಿಲಿನ ಬರಹಗಾರರಲ್ಲಿ ಒಬ್ಬರಾಗಿರುವ ನಾಡೋಜ ಡಾ. ಡಿ. ಎನ್. ಶಂಕರಬಟ್ಟರಿಗೆ ಈ ಬಾರಿಯ ಪಂಪ ಪ್ರಶಸ್ತಿಯನ್ನು ಕೊಡಲಾಗುವುದೆಂದು ಸುದ್ದಿಮೂಲಗಳು ಇದೀಗ ತಿಳಿಸಿವೆ. ಪ್ರಶಸ್ತಿಯನ್ನು ಮುಂಬರುವ ಕದಂಬೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕ್ರುತಿ ಇಲಾಕೆಯವರಿಂದ ಕೊಡಲಾಗುವುದು ಎನ್ನಲಾಗಿದೆ.

ಕನ್ನಡವನ್ನು ಜಗತ್ತಿನ ಬೇರಾವ ನುಡಿಗೂ ತಲೆಬಾಗಿಸದ ನುಡಿಯಾಗಿಸಲು ಬರಹದ ಕನ್ನಡದಲ್ಲಿ ಏನೇನು ಬದಲಾವಣೆಗಳಾಗಬೇಕೋ ಅವುಗಳನ್ನು ಮಾಡಿಕೊಂಡು ಕನ್ನಡವನ್ನು ಮುನ್ನಡೆಸುತ್ತಿರುವ ಯುವಕರ ಪಡೆಯೊಂದಿದೆ; ಅವರಿಗೆ ’ಎಲ್ಲರಕನ್ನಡ’ ಎಂದರೆ ಏನೆಂದು ಹೊಸದಾಗಿ ಹೇಳಬೇಕಿಲ್ಲ. ಈ ಕ್ರಾಂತಿಯನ್ನು ಮಿಂಬಲೆಗೆ ’ಹೊನಲು’ ತಂದಿತು ಎಂದರ ತಪ್ಪಾಗಲಾರದು. ನಮ್ಮ ಎಂಬತ್ತಕ್ಕೂ ಹೆಚ್ಚು (ಮತ್ತು ಇನ್ನೂ ಬೆಳೆಯುತ್ತಿರುವ ಎಣಿಕೆಯ) ಬರಹಗಾರರು ಈ ಚಳುವಳಿಯಲ್ಲಿ ಬಹಳ ಮುಕ್ಯವಾದ ಪಾತ್ರವನ್ನು ಪಡೆದುಕೊಂಡಿದ್ದಾರೆ.

ನೀವೂ ಬನ್ನಿ, ಕನ್ನಡದ ಈ ಹೊಸಬಗೆಯ ಚಳುವಳಿಯಲ್ಲಿ ಪಾಲ್ಗೊಳ್ಳಿ! ಇರುವುದೊಂದೇ ಬಾಳು, ಅದರಲ್ಲಿ ನಮಗಿರುವುದು ಒಂದೇ ಕನ್ನಡ, ಮುಂದಿನ ಶತಮಾನಕ್ಕೆ ಅದನ್ನು ಸಜ್ಜುಗೊಳಿಸಲು ನಮಗಿರುವುದು ಒಂದೇ ಅವಕಾಶ. ಒಗ್ಗಟ್ಟಿನಿಂದ ದುಡಿದರೆ ಕನ್ನಡ ಮತ್ತೊಂದು ಜಪಾನೀಸ್, ಮತ್ತೊಂದು ಹೀಬ್ರೂ, ಇಲ್ಲವೇ ಮತ್ತೊಂದು ಕೊರಿಯನ್ ಆಗುವುದರಲ್ಲಿ ಸಂದೇಹವಿಲ್ಲ. ದುಡಿಯದಿದ್ದರೆ ಅದೇ ಹಳೆಯ ಗೋಳು – “ಕನ್ನಡದಲ್ಲಿ ಅದಿಲ್ಲ, ಇದಿಲ್ಲ, ಕನ್ನಡದಲ್ಲಿ ಅದಾಗುವುದಿಲ್ಲ, ಇದಾಗುವುದಿಲ್ಲ!”. ಸಾಕು ಈ ಗೋಳು! ಬನ್ನಿ, ಮುನ್ನಡೆಯೋಣ!

ಬಟ್ಟರ ’ಹೊನಲು’ ಬರಹಗಳನ್ನು ಓದಲು ಇಲ್ಲಿ ಒತ್ತಿ. ಅವರ ವಿಕಿಪೀಡಿಯ ಪುಟ ಇಲ್ಲಿದೆ.

ಬಟ್ಟರ ಹಲವಾರು ಹೊತ್ತಗೆಗಳನ್ನು ellarakannada.org ನಿಂದ ಇಳಿಸಿಕೊಂಡು ಬಿಟ್ಟಿಯಾಗಿ ಓದುವ ಅವಕಾಶವಿದೆ; ಅದನ್ನು ಬಳಸಿಕೊಳ್ಳಿ ಎಂದು ಈ ಸಂದರ‍್ಬದಲ್ಲಿ ಕೇಳಿಕೊಳ್ಳುತ್ತೇನೆ.

3 ಅನಿಸಿಕೆಗಳು

  1. ತಮ್ಮ ಅರಕೆಗಳಿಂದ ಕನ್ನಡಕ್ಕೆ ಹೊಸ ಶಕ್ತಿ ತುಂಬಲು ಪ್ರೇರೇಪಿಸುತ್ತಿರುವ ಜಗತ್ತಿನ ಹೆಸರಾಂತ ನುಡಿಯರಿಗರಲ್ಲಿ ಒಬ್ಬರಾದ ದರ್ಭೆ ಶಂಕರ ಭಟ್ಟರವರಿಗೆ ಅಭಿನಂದನೆಗಳು

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: