ದೊಣ್ಣೆನಾಯಕರು

ಯಶವನ್ತ ಬಾಣಸವಾಡಿ.

doNNe naayakaru

ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು
ಕನ್ನಡವನ್ನು ಗುತ್ತಿಗೆ ಪಡೆದವರು
ರಾಮನ ಕಪಿಗಳ ಕುಲದವರು
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

ದಿಲ್ಲಿಯ ದಣಿಗಳ ತಾಳಕೆ ಕುಣಿಯುತ
ನಾಡೊಲುಮೆಯ ತಂತಿಯ ಮೀಟುತ
ಹಲತನವನು ಅಳಿಸುವ ಹುನ್ನಾರನು ಎಣೆಯುವ
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

ನೆನೆಸಿನ ರಾಶ್ಟ್ರಕೆ ಎದೆಯನು ಬಡಿಯುವ
ಬೆಳಗಾವಿಯ ಸುದ್ದಿಗೆ ಗೊರಕೆಯ ಹೊಡೆಯುವ
ಕಾವೇರಿಯ ಕೂಗಿಗೆ ಕಣ್-ಕಿವಿ ಮುಚ್ಚುವ
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

ತನಿಯಾಳಿಕೆಗಿಂತ ತನ್ನಾಳಿಕೆಯೇ ಮಿಗಿಲೆಂಬ
ಈಳಿಗೆಯ ಅಡಿಕಟ್ಟಲೆಯನು ಮರೆತು
ಒಪ್ಪುಕೂಟದಾಳ್ವಿಕೆಗೆ ಚಟ್ಟವ ಕಟ್ಟುವ
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

ಹಿಂದಿ ಹೇರಿಕೆಯ ಇದಿರಿಸಿದ
ಎದೆಗಾರರ ಹೆಸರನು ಜಪಿಸುತಲೇ
ಹಿತ್ತಲ ಬಾಗಿಲಿನಿಂದ ಹಿಂದಿಯ ಬರಸೆಳೆದಪ್ಪುವ
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

ಕನ್ನಡದಲಿ ಸಕ್ಕದ ಮೆರವಣಿಗೆಯ
ದಿಕ್ಕರಿಸಿದ ಮಂದಿಯ ಹೊಗಳುತಲೇ
ನೇರ್‍ಪಿನ ನೆಪದಲಿ ಸಕ್ಕದವನು ತುರುಕುವ
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

ಕನ್ನಡದ ಕಯ್ಗಳಿಗೆ ಕೋಳವ ತೊಡಿಸುತ
ದರ್‍ಮದ ನೆಪದಲಿ ಚರ್‍ಮವ ಸುಲಿಯುವ
ಕತ್ತಿ-ಕತಿಯಾರರ ಗರಡಿಯ ಮನೆಯವರು
ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು

(ಚಿತ್ರ: http://blogs.splunk.com/2009/10/08/the-puppet-master-cometh)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: