ಚಿಮ್ಮುತಿರಲಿ ಉತ್ಸಾಹದ ಚಿಲುಮೆ

ಬಸವರಾಜ್ ಕಂಟಿ

??????????????????????????????????

ಚಿಮ್ಮುತಿರಲಿ ಉತ್ಸಾಹದ ಚಿಲುಮೆ
ಜೀವದಿ ಸದಾ
ಉಕ್ಕುತಿರಲಿ ಮುಂಬಾಳ ಆಸೆ
ಮನದಿ ಸದಾ

ನುಗ್ಗುತಿರಲಿ ಕೆಚ್ಚೆದೆಯ ನದಿ
ಗೋಡೆಯ ಒಡಿದು, ಬಂಡೆಯ ಪುಡಿದು
ಹರಿಯುತಿರಲಿ ಹರುಶದ ಹೊನಲು
ತಣಿಸಿ ತನ್ನೊಡಲು ಹಸಿರಿಸಿ ಸುತ್ತಲು

ಕೊರಗದಿರು ಕಹಿಯ ನೆನೆದು.
ಮರುಗದಿರು ಹಿನ್ನಡೆಯ ಹಿಡಿದು
ಸಿಲುಕದಿರು ಬೇಸರದ ಬಲೆಯಲಿ
ಕೊಚ್ಚದಿರು ದಣಿವಿನ ಸುಳಿಯಲಿ

ಗುರಿಯೆಡೆಗೆ ಗಮನವಿರಲಿ
ಹೊಸದೆಡೆಗೆ ಮಿಡಿತವಿರಲಿ
ನಿಂತ ನೀರಾಗದೆ, ಹರಿಯುತಿರಲಿ
ಈ ಬದುಕು ಸದಾ

(ಚಿತ್ರ: www.auntybinnaz.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: